Live Stream

[ytplayer id=’22727′]

| Latest Version 8.0.1 |

Local NewsNational NewsState News

ಹೇರ್​ ಡ್ರೈಯರ್ ​​ಸ್ಫೋಟಗೊಂಡು ಬಾಗಲಕೋಟೆಯ ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರ

ಹೇರ್​ ಡ್ರೈಯರ್ ​​ಸ್ಫೋಟಗೊಂಡು ಬಾಗಲಕೋಟೆಯ ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರ

 

ಬಾಗಲಕೋಟೆ: ಜಿಲ್ಲೆಯ ಇಳಕಲ್‌ನಲ್ಲಿ ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯ ಎರಡೂ ಹಸ್ತಗಳು ಛಿದ್ರಗೊಂಡಿವೆ. ಶಶಿಕಲಾ ಎಂಬುವವರ ಹೆಸರಿನಲ್ಲಿ ಬಂದ ಪಾರ್ಸಲ್ ಅನ್ನು ಬಸಮ್ಮ ಎಂಬ ಮಹಿಳೆ ತೆಗೆದುಕೊಂಡಿದ್ದರು. ಪಾರ್ಸಲ್ ತೆರೆದು ಹೇರ್​ ಡ್ರೈಯರ್ ಆನ್​ ಮಾಡಿದಾಗ ಸ್ಫೋಟಗೊಂಡಿದೆ. ಈ ಘಟನೆಯು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ.20 ರಂದು ಹೇರ್​ ಡ್ರೈಯರ್ ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರಗೊಂಡಿವೆ. ಇಳಕಲ್ ನಗರದಲ್ಲಿ ಘಟನೆ ನಡೆದಿದೆ. ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಗಾಯಗೊಂಡವರು. ಶಶಿಕಲಾ ಎಂಬುವರ ಮನೆಗೆ ಹೇರ್​ ಡ್ರೈಯರ್ ಕೊರಿಯರ್ ಮೂಲಕ ​ಬಂದಿತ್ತು. ಪಾರ್ಸಲ್​​ ಮೇಲೆ ಶಶಿಕಲಾ ಅವರ ಮೊಬೈಲ್​ ನಂಬರ್​ ಇದ್ದ ಹಿನ್ನೆಲೆಯಲ್ಲಿ ಡಿಟಿಡಿಸಿ ಕೊರಿಯರ್​ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, “ನಿಮ್ಮ ಹೆಸರಿಗೆ ​ಪಾರ್ಸಲ್​ ಬಂದಿದೆ. ಕಲೆಕ್ಟ್​ ಮಾಡಿ” ಎಂದಿದ್ದಾನೆ. ಈ ವೇಳೆ ಶಶಿಕಲಾ “ನಾನು ಬೇರೆ ಊರಿನಲ್ಲಿದ್ದೇನೆ” ಎಂದು ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಕೋರಿಯರ್​ ಸಿಬ್ಬಂದಿ, ಪದೇ ಪದೇ ಕರೆ ಮಾಡಿದ್ದಾನೆ. ಕೋರಿಯರ್​ ಸಿಬ್ಬಂದಿ ಕಾಟಕ್ಕೆ ಬೇಸತ್ತ ಶಶಿಕಲಾ ಅವರು ತಮ್ಮ ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ “ಯಾವುದೋ ಪಾರ್ಸಲ್ ಬಂದಿದೆ ತೆಗೆದುಕೊ” ಎಂದು ಹೇಳಿದ್ದಾರೆ.​ ಆಗ, ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್​ ಪಡೆದಿದ್ದಾರೆ. ಪಾರ್ಸಲ್​ ತೆರದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಇದೇ ವೇಳೆ ಅಲ್ಲೇ ಇದ್ದ ಪಕ್ಕದ ಮನೆಯವರು ಆನ್​ ಮಾಡಿ ತೋರಿಸಿ ಎಂದಿದ್ದಾರೆ. ಬಸಮ್ಮಾ ಅವರು ಹೇರ್​ ಡ್ರೈಯರ್ ಸ್ವಿಚ್​​ ಹಾಕಿ ಆನ್​ ಮಾಡಿದಾಗ ಸ್ಫೋಟಗೊಂಡಿದೆ.

ಹೇರ್​ ಡ್ರೈಯರ್ ಸ್ಫೋಟದಿಂದ ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ. ಬೆರಳುಗಳು ತುಂಡಾಗಿ ಬಿದ್ದಿವೆ. ಮನೆಯಲ್ಲ ರಕ್ತಮಯವಾಗಿದೆ. ಕೂಡಲೇ ಬಸಮ್ಮ ಅವರನ್ನು ಇಳಕಲ್​ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಶಿಕಲಾ ಅವರು ಹೇಳುವ ಪ್ರಕಾರ, ಹೇರ್ ಡ್ರೈಯರ್ ಆರ್ಡರ್ ಮಾಡಿಲ್ಲವಂತೆ. ಆದರೆ, ಅವರ ಹೆಸರಲ್ಲಿ ಹೇರ್ ಡ್ರೈಯರ್ ಪಾರ್ಸಲ್ ಹೇಗೆ ಬಂತು? ಹಣ ನೀಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಾಗಿದೆ. ಇನ್ನು, ಹೇರ್ ಡ್ರೈಯರ್ ಆಂಧ್ರದ ವಿಶಾಖಪಟ್ಟಣದಲ್ಲಿ ತಯಾರಾಗಿದೆ ಎಂಬ ಅಂಶ ತಿಳುದುಬಂದಿದೆ. ಹೀಗಾಗಿ, ಈ ಸ್ಫೋಟ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.

ಬಸಮ್ಮ ದಾಖಲಾಗಿರುವ ಇಳಕಲ್ ಖಾಸಗಿ ಆಸ್ಪತ್ರೆಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ಆರೋಗ್ಯ ವಿಚಾರಿಸಿದರು. ಬಸಮ್ಮ ಪತಿ ಪಾಪಣ್ಣ 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಮೃತಪಟ್ಟಿದ್ದರು.

 

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";