Live Stream

[ytplayer id=’22727′]

| Latest Version 8.0.1 |

Local NewsState News

ಬಹುವೃತ್ತಿ ಕೌಶಲ್ಯಾಭಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ; ಬಾಲಚಂದ್ರ ಜಾಬಶೆಟ್ಟಿ

ಬಹುವೃತ್ತಿ ಕೌಶಲ್ಯಾಭಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ; ಬಾಲಚಂದ್ರ ಜಾಬಶೆಟ್ಟಿ

 

ಕರ್ನಾಟಕ ಸರಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಂಕಣವಾಡಿ-ರಾಮದುರ್ಗಲ್ಲಿ ಆಯೋಜಿಸಲಾಗಿದ್ದ ಉದ್ದಿಮೆದಾರರಿಗೆ ಮತ್ತು ತರಬೇತಿದಾರರಿಗೆ ಪ್ರಧಾನ ಮಂತ್ರಿ ಇಂಟರ್ನಶಿಪ ಮತ್ತು ಅಪ್ರೆಂಟಿಸ್ ಶಿಪ್ ತರಬೇತಿ ಕಾರ್ಯಕ್ರಮ ಗಳ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾಲಚಂದ್ರ ಜಾಬಶೆಟ್ಟಿಯವರು ಮಾತನಾಡುತ್ತಾ ವೈಯಕ್ತಿಕ ಕೌಶಲ್ಯಾಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ, ಸತತ ಪರಿಶ್ರಮದಿಂದ ಸ್ಕಿಲ್ಲಿಂಗ್, ರೀಸ್ಕಿಲ್ಲಿಂಗ್ ಹಾಗೂ ಅಪ್ ಸ್ಕಿಲ್ಲಿಂಗ್ ಮೂಲಕ ವೈಯಕ್ತಿಕ ಅಭಿವೃದ್ಧಿಯ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ, ತನ್ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬಹುದಾಗಿದೆಯೆಂದು ಅವರು ನುಡಿದರು.

ಬಹು ವೃತ್ತಿಗಳಲ್ಲಿ ಪರಿಣಿತಿ ಹೊಂದುವುದು ಇಂದಿನ ಅವಶ್ಯಕತೆಯಾಗಿದ್ದು, ಅದರಿಂದಾಗುವ ಉತ್ಪಾದಕತೆಯ ಹೆಚ್ಚಳದಿಂದ ವೈಯಕ್ತಿಕ ಆದಾಯದಲ್ಲಾಗುವ ಗಣನೀಯ ಹೆಚ್ಚಳವು ದೇಶದ ಆರ್ಥಿಕ ಅ‌ಭಿವೃದ್ಧಿಗೆ ಪೂರಕವಾಗುವುದು. ಪರಸ್ಪರ ಪೂರಕವಾಗಿರುವ ಒಂದಕ್ಕಿಂತ ಹೆಚ್ಚಿನ ವೃತ್ತಿಗಳಲ್ಲಿ ಪರಿಣಿತಿ ಹೊಂದಿ ಜೀವನದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೊಂದಲು ಜಾಬಶೆಟ್ಟಿಯವರು ಕರೆನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆಯ್.ಎಮ್.ಮುಲ್ಲಾ ಸದರೀ ಯೋಜನೆಯಲ್ಲಿ ಸರಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯಗಳ ಕುರಿತು ವಿವರ ನೀಡಿದರು.
ಇಲೆಕ್ಟ್ರೀಸಿನ ವಿಭಾಗದ ತರಬೇತುದಾರ ಎನ್ ಎಸ್ ವಾಲಿ ಹಾಗೂ ಅರುಣಾ ನೀಲಸಾಗರರವರು ವೇದಿಕೆಯಲ್ಲಿದ್ದರು. ತರಬೇತುದಾರ ಯಲಗೋಡರವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ವಂದಿದಸಿದರು.
ತರಬೇತುದಾರ ಅಂಗಡಿ, ಇಬ್ರಾಹಿಮ್ ಬಿಳೆಕುದರಿ ಹಾಗೂ ಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";