ಬೆಳಗಾವಿ:- ಸಮಾಜದಲ್ಲಿರುವ ಅಂಧಶೃದ್ದೆ ನಿರ್ಮೂಲನೆಗೆ ೧೨ ನೇ ಶತಮಾನದಲ್ಲಿ ಬಸವಣ್ಣನವರು ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಆದಾಗ್ಗೂ ಇನ್ನೂ ಅನೇಕ ಮೂಢನಂಬಿಕೆಗಳನ್ನು ಆಚರಿಸುತ್ತಿದ್ದೇವೆ. ಕಲ್ಲು ಮಣ್ಣಿನ ನಾಗರುಗಳಿಗೆ ಹಾಲು ಹಾಕಿ ಪೌಷ್ಠಿಕ ಆಹಾರ ವ್ಯರ್ಥ ಮಾಡುತ್ತಿದ್ದೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಅಭಿಪ್ರಾಯಪಟ್ಟರು. ನಾಗನೂರು ಮಠ ನಾಡಿನ ಅಬ್ಯುದಯಕ್ಕಾಗಿ ಅನೇಕ ಕೊಡುಗೆ ಕೊಟ್ಟಿದೆ. ಸಮಾಜದ ನಿರ್ಲಕ್ಷಕ್ಕೆ ಒಳಗಾದ ಹಿರಿಯರಿಗೆ ಆಶ್ರಯ ನೀಡುತ್ತೀರುವುದು ಅಭಿನಂದನೀಯವೆAದರು.
ನಗರದ ದೇವರಾಜ ಅರಸ ಬಡಾವಣೆಯಲ್ಲಿರುವ ಶ್ರೀ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದಲ್ಲಿ ಜಾಗತಿಕ ಲಿಂಗಾಯತÀ ಮಹಾಸಭೆ ಬೆಳಗಾವಿ ಆಯೊಜಿಸಿದ್ದ ಬಸವ ಪಂಚಮಿಯ ಕಾರ್ಯಕ್ರಮದಲ್ಲಿ ಹಿರಿಯರಿಗೆ ಹಾಲು ನೀಡಿ ಮಾತನಾಡಿದರು.
ಸಂಚಾರಿ ಗುರುಬಸವದಳದ ಶ್ರೀ ಮಹಾಂತೇಶ ತೋರಣಗಟ್ಟಿ ಮಾತನಾಡಿ ಬಸವ ಅನುಯಾಯಿಗಳು ಸಂಚಾರಿ ಬಸವದಳ ಹಾಗೂ ಲಿಂಗಾಯತ ಮಹಾಸಭೆವತಿಯಿಂದ ವೃದ್ಧಾಶ್ರಮದ ಹಿರಿಯರಿಗೆ ಹಾಲು ನೀಡುವ ಮೂಲಕ ಬಸವ ಪಂಚಮಿ ಆಚರಿಸುತ್ತಿದ್ದೇವೆ. ಸಮಾಜಮುಖಿಕೆಲಸಗಳಲ್ಲಿ ನಾವೆಲ್ಲ ತೊಡಗಬೇಕು, ಭಕ್ತಿ ಕಾಯಕ, ದಾಸೋಹದಲ್ಲಿ ಪಾಲ್ಗೊಂಡ ದೀನ ದುರ್ಬಲರ ಸೇವೆ ಮಾಡಬೇಕು ಎಂದರು.
ಶರಣ ಸಾಹಿತ್ಯ ಪರಿಷಿತ ತಾಲೂಕಾ ಘಟಕದ ಅಧ್ಯಕ್ಷ ಪ್ರವೀಣ ರೊಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ನಗರ ಘಟಕ ಕಾರ್ಯದರ್ಶಿ ಸಿ,ಎಂ. ಬೂದಿಹಾಳ ಮಾತನಾಡಿ ಪ್ರತಿಯೊಂದು ಹಬ್ಬ ಹರಿದಿನಗಳಿಗೂ ತನ್ನದೇ ಆದ ಪ್ರಾಮುಖ್ಯತೆಯಿದೆ. ಭಕ್ತಿಯ ಜೊತೆಗೆ ದೀನ ದುರ್ಬಲರ ಸೇವೆಗೆ ನಾವೆಲ್ಲ ಆದ್ಯತೆ ಕೊಡಬೇಕಾಗಿದೆ ಎಂದರು. ಸಂಯೋಜಕರಾದ ಎಂ.ಎಸ.ಚೌಗಲಾ, ವಿರುಪಾಕ್ಷಿ ಕುಂದ್ರಾ¼, ಬಾಳಿ, ಬಾಳಗೌಡ ದೊಡಬಾಗಿ ಶ್ರೀಮತಿ. ನೇತ್ರಾವತಿ ರಾಮಾಪುರಿ ಉಪಸ್ಥಿತರಿದ್ದರು. ಮೋಹನ ಗುಂಡ್ಲುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾಚಾರ್ಯ ಕಿರಣ ಚೌಗಲಾ ನಿರೂಪಿಸಿ ವಂದಿಸಿದರು.