ಮೈಸೂರು: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ, ಮೈಸೂರು 24.05.2025 ಹಾಗೂ 25.05.2025ರಂದು ಮೈಸೂರಿನಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮ ಹಾಗೂ ವಿವಿಧ ವೇದಿಕೆ ಕಾರ್ಯಕ್ರಮಗಳ ಜನರಿಗೆ ತಿಳಿಸುವ ಸಲುವಾಗಿ, ಬಸವಣ್ಣ ಮೂರ್ತಿಯ ಪ್ರಚಾರ ವಾಹನಕ್ಕೆ ನಮ್ಮೂರಿನ ಹಿರಿಯರು ದೇವಸ್ಥಾನದ ಪದಾಧಿಕಾರಿಗಳು ಪುಷ್ಪಾರ್ಚನೆ ಸಲ್ಲಿಸಿದರು.
ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿ ವರ್ಷ ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. 1998ರಲ್ಲಿ ಎಲ್ಲಾ ವೀರಶೈವ ಲಿಂಗಾಯತ ಸಂಘಸಂಸ್ಥೆಗಳು ಒಟ್ಟಾಗಿ ಸೇರಿ ‘ ಬಸವ ಬಳಗಗಳ ಒಕ್ಕೂಟ’ ವನ್ನು ಅಸ್ತಿತ್ವಕ್ಕೆ ತರಲಾಯಿತು.
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಹರಗುರು ಚರಮೂರ್ತಿಗಳು ಹಾಗೂ ಸಮಾಜದ ಮುಖಂಡರ ನಿರ್ಣಯದಂತೆ ಬಸವ ಬಳಗಗಳ ಒಕ್ಕೂಟವು ಕಳೆದ 27 ವರ್ಷಗಳಿಂದಲೂ ನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಬಸವ ಜಯಂತಿ ಆಚರಣೆ ಮಾಡುತ್ತಿರುವುದು ನಿಮಗೆಲ್ಲಾ ತಿಳಿದಿರುವ ಸಂಗತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ವಿವಿಧ ಸಂಘಸಂಸ್ಥೆಗಳ ಶರಣ ಬಂಧುಗಳನ್ನೂ ಒಳಗೊಂಡು ಬಸವ ‘ಜಯಂತಿ 2025ರ ಬಸವ ಜಯಂತಿಯನ್ನು ವಿಜೃಂಭಣೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದೆ. ನಮ್ಮ ನಡಿಗೆ ಅನುಭವ ಮಂಟಪದ ಕಡೆಗೆ ಎಂಬ ಘೋಷ ವಾಕ್ಯದಡಿ 2025ರ ನಮ್ಮಬಸವ ಜಯಂತಿ ಆಚರಿಸಲು ಬಸವ ಬಳಗಗಳ ಒಕ್ಕೂಟವು ಶರಣ ಬಂಧುಗಳ ಸಹಕಾರ ಸಲಹೆಯನ್ನು ಕೋರುತ್ತದೆ. 2025ರ ಸಾಲಿನ ಬಸವ ಜಯಂತಿ ಅಧ್ಯಕ್ಷರನ್ನಾಗಿ ಬಿ.ಕೆ. ನಾಗರಾಜು, ಬ್ಯಾತಹಳ್ಳಿ ಆದ ನನ್ನನ್ನು ನೇಮಕ ಮಾಡಲಾಗಿದೆ. ಈ ಬಸವ ಜಯಂತಿ ಕೇವಲ ಸಾಂಕೇತಿಕ ಆಚರಣೆಗಳಿಗಷ್ಟೆ ಸೀಮಿತವಾಗಬಾರದು. ಸಮಾಜದ ಪ್ರತಿಯೊಬ್ಬ ಶರಣ/ಶರಣೆಯರ ಮನೆಮನಗಳನ್ನು ತಲುಪಬೇಕು. ಸಮಾಜದ ಸಂಘಟನೆಯನ್ನು ಬಲಪಡಿಸಲು ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಬೇಕು.
ಇದರಿಂದ ಸಮಾಜದ ಸಂಘಟನೆ ಸಧೃಢವಾಗಲು ಸಾಧ್ಯ. ನಮ್ಮ ನಡಿಗೆ ಅನುಭವ ಮಂಟಪದ ಕಡೆಗೆ 2025ರ ನಮ್ಮ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಹಸ್ರಾರು ಶರಣ ಬಂಧುಗಳು ಭಾಗವಹಿಸುವ ನಿರೀಕ್ಷೆ ಇದೆ. ‘ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ ಇದು ಅನುಭವ ಮಂಟಪದ ಮೂಲ ಮಂತ್ರ ಹೆಚ್ಚೆಚ್ಚು ಶರಣರು ಅನುಭವ ಮಂಟಪಕ್ಕೆ ಬರಬೇಕು ಮತ್ತು ಈ ಅನುಭವ ಮಂಟಪದಿಂದ ಸಮಾಜ ಜಾಗೃತವಾಗಬೇಕು, ವಿವೇಕಾಗೃತವಾಗಬೇಕು ಎನ್ನುವುದು ಬಸವಣ್ಣನವರ ಮೂಲ ಆಶಯವಾಗಿತ್ತು.
ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಂದ ಮೈಸೂರು ನಗರದ ವಿವಿಧ ಬಡಾವಣೆಗಳಿಂದ ಎಂದಿನಂತೆ ಶರಣಬಂಧುಗಳು ಕುಟುಂಬ ಸಮೇತ ಆಗಮಿಸುವ ಮೂಲಕ 2025ರ ನಮ್ಮ ಬಸವ ಜಯಂತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು (ಬಿ.ಕೆ. ನಾಗರಾಜು ಬ್ಯಾತಹಳ್ಳಿ, ಅಧ್ಯಕ್ಷರು, ನಮ್ಮ ಬಸವ ಜಯಂತಿ 2025) ವಿನಂತಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ ಇವರ ದಿವ್ಯಸಾನ್ನಿಧ್ಯದಲ್ಲಿ 2025ರ ಬಸವ ಜಯಂತಿಯ ಜರುಗಲಿರುವ ಕಾರ್ಯಕ್ರಮಗಳು:
- 24.05.2025 ಶನಿವಾರ, ಬೆಳಗ್ಗೆ 8.00 ಗಂಟೆಗೆ ಪಟ್ಟಲ ಧ್ವಜಾರೋಹಣದೊಂದಿಗೆ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆಯೊಂದಿಗೆ ಬೆಳಗ್ಗೆ 8.30 ಗಂಟೆಗೆ ಶ್ರೀ ಬಸವೇಶ್ವರ ಪುತ್ಥಳಿ ಮೆರವಣಿಗೆಯು ಶ್ರೀ ಬಸವೇಶ್ವರರ ಪುತ್ಥಳಿಯ ಮೆರವಣಿಗೆ.
- ನಂದಿಧ್ವಜದ ಪೂಜೆಯೊಂದಿಗೆ ಮಂಗಳವಾದ್ಯ, ವೀರಗಾಸೆ, ಕಲಾ ತಂಡಗಳು, ಸ್ತಬ್ಧಚಿತ್ರಗಳು, ಭಜನಾ ಮೇಳ ಮತ್ತು ಶರಣ ಬಂಧುಗಳ ಸಮೇತ ಆರಂಭವಾಗಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ- ಶ್ರೀ ಬಸವೇಶ್ವರ ವೃತ್ತ-ನ್ಯೂ ಸಯ್ಯಾಜಿರಾವ್ ರಸ್ತೆ-ನಗರ ಪಾಲಿಕೆ-ಕೆ.ಆರ್. ವೃತ್ತ- ಡಿ. ದೇವರಾಜ ಅರಸು ರಸ್ತೆ-ಮಹಾರಾಣಿ ಕಾಲೇಜು ವೃತ್ತದ ಮುಖಾಂತರ ಹುಣಸೂರು ರಸ್ತೆಯಲ್ಲಿ ಸಂಚರಿಸಿ ಕಲಾಮಂದಿರವನ್ನು ತಲುಪಲಿದೆ.