ಹುಕ್ಕೇರಿ: ತಾಲೂಕಿನ ಬಸಾಪುರ ಗ್ರಾಮ ವೀರಯೋಧ
ರುದ್ರಪ್ಪಾ ಗೋಕಾಕ ಇವರು ರಜಾ ನಿಮಿತ್ಯ ತಮ್ಮ ಸ್ವಗ್ರಾಮಕ್ಕೆ ಬರುತ್ತಿರುವಾಗ ಹೃದಯಘಾತದಿಂದ
ನಿಧನ ಹೊಂದಿದ್ದಾರೆ.
ಇವರು 30 ದಿನ ರಜೆ ಪಡೆದುಕೊಂಡು ತಮ್ಮ ಸ್ವಗ್ರಾಮ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆ ಸಮೀಪ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ತಮ್ಮ ಕೊನೆ ಉಸಿರು ಎಳೆದಿದ್ದಾರೆ.
ಗುರುವಾರ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಮನ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಟುಂಬದ ಆಕ್ರಂದ ಮುಗಿಲು ಮುಟ್ಟಿತು.
ವರದಿ:ಕಲ್ಲಪ್ಪ ಪಾಮನಾಯಿಕ್