ಬೆಳಗಾವಿ: ಮಹಿಳೆ ಇಂದು ಅಬಲೆಯಲ್ಲ, ಸಬಲೆಯಾಗಿದ್ದಾಳೆ. ಆದುದರಿಂದ ಇಂದು ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮವಾಗಿ ಸಕ್ಷಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅಂತಹ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ವೇದಾಂತ ಫೌಂಡೇಶನ್ ಕೈಗೊಂಡಿರುವ ಕಾರ್ಯವು ಶ್ಲಾಘನೀಯವಾಗಿದೆ ಎಂದು ನಿವೃತ್ತ ಮುಖ್ಯಅಧ್ಯಾಪಕರಾದ ಶ್ರೀ ಬಿ. ಬಿ. ದೇಸಾಯಿ ಯವರು ವೇದಾಂತ ಫೌಂಡೇಶನ್ ನಿಂದ ಆಯೋಜಿಸಲ್ಪಟ್ಟ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ವೇಷಭೂಷಣ, ಮೆಹಂದಿ, ರಂಗೋಲಿ, 100ಮೀ. ಓಟ, ಪೊಟಾಟೋ ರೇಸ್, ಬೆಂಕಿಯಿಲ್ಲದೇ ಅಡಿಗೆ ತಯಾರಿಸುವುದು ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳ ಉದ್ಘಾಟನೆಯಾದ ನಂತರ ಮಾತನಾಡುತ್ತ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕು ಎಂದು ಅಭಿಪ್ರಾಯ ಪಟ್ಟರು. ವಿಶ್ವ ಭಾರತ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ವಿಜಯ ನಂದಿಹಳ್ಳಿ ಯವರು ಮಹಿಳೆಯರ ಸಕ್ಷಮತೆಗಾಗಿ ಸರಕಾರದಿಂದ ಜಾರಿಯಾಗಿರುವ ಯೋಜನೆಗಳ ಮಾಹಿತಿಯನ್ನು ತಿಳಿಸಿ ಅವುಗಳ ಪ್ರಯೋಜನ ಪಡೆಯಲು ತಿಳಿಸಿದರು. ಶ್ರೀಮತಿ ಲಲಿತ ಮೋಹನ ರೆಡ್ಡಿ, ಗಣಪತ್ ಪಾಟೀಲ್ ರವರು ಮಾರ್ಗದರ್ಶನ ಮಾಡಿದರು.
ವೇದಾಂತ ಫೌಂಡೇಶನ್ ನ ಸಂಸ್ಥಾಪಕರಾದ ಸತೀಶ ಪಾಟೀಲ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಚಂದಗಡಕರ ಅವರ ಸ್ವಾಗತ ಭಾಷಣದ ನಂತರ ಲಲಿತಾ ರೆಡ್ಡಿ ಶ್ರೀಕಾಂತ ಅಜಗಾವಕರ, ರವೀಂದ್ರ ಹರಗುಡೆ ಯವರು ಸ್ಪರ್ಧೆಗಳ ಉದ್ಘಾಟನೆ ಮಾಡಿದರು.
ಶ್ರೀಮತಿ ಜಯಶ್ರೀ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು, ಎನ್. ಡಿ. ಮಾದಾರ್ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿ. ಬಿ. ಪಾಟೀಲ್, ಮನೋಹರ್ ಬೆಳಗಾವಕರ್,, ಯುವರಾಜ ರತ್ನಾಕರ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು. ರವಿ ಗುರವ್, ಉಮೇಶ್ ಬೆಳಗುಂದಕರ, ಅರ್ಜುನ ಭೇಕಣೆ ಮತ್ತು ಪ್ರವೀಣ್ ಪಾಟೀಲ್ ರವರು ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರು :
ವೇಷಭೂಷಣ
1.ಶ್ವೇತಾ ಕೋಲಾರ್ (ಪ್ರ )
2.ಪ್ರಿಯಾಂಕ ಚೌಗುಲೆ (ದ್ವಿ )
3.ಗೌತಮಿ ದೇಶಪಾಂಡೆ (ತೃ )
ಮೆಹಂದಿ
1.ಪ್ರನೀತಾ ಧಬಾಲೆ (ಪ್ರ )
2.ವೃಶಾಲಿ ಸುತಾರ್ (ದ್ವಿ )
3.ವರ್ಷಾ ಪಾಟೀಲ್ (ತೃ )
ರಂಗೋಲಿ
1.ಸೋನಾಲಿ ಚೌಗುಲೆ (ಪ್ರ )
2.ಮೇಘಾ ಛೋಡಕೆ (ದ್ವಿ )
3.ವೈಶಾಲಿ ದೊಡಮನಿ (ತೃ )
100ಮೀ ಓಟ
1.ಅನುರಾಧಾ ಮಡಿವಾಳ (ಪ್ರ )
2.ಪ್ರಜ್ಞಾ ಪಾಟೀಲ್ (ದ್ವಿ )
3.ಅಶ್ವಿನಿ ಶ್ರೀನಿವಾಸ (ತೃ )
ಪೊಟಾಟೋ ರೇಸ್
1.ಶೃತಿ ಕೋಲಾರ್ (ಪ್ರ )
2.ಅಶ್ವಿನಿ ಶ್ರೀನಿವಾಸ (ದ್ವಿ )
3.ದಿವ್ಯಾ ಎನಬೇರ (ತೃ )
ಬೆಂಕಿಯಿಲ್ಲದೇ ಅಡಿಗೆ ಮಾಡುವುದು
1.ರೇಣುಕಾ ಕಂಗ್ರಾಳಕರ್ (ಪ್ರ )
2.ಸೋನಿಯಾ ಪಾಟೀಲ್ (ದ್ವಿ )
3.ಚಂದಾ ಪಾಟೀಲ್ (ತೃ )
ಸಂಗೀತ ಖುರ್ಚಿ
1.ಸೋನಾಲಿ ಮಾಯನ್ನಾಚೆ (ಪ್ರ )
2.ರೇಣುಕಾ ಕಂಗ್ರಾಳಕರ (ದ್ವಿ )
3.ಪ್ರಜ್ಞಾ ಪಾಟೀಲ್ (ತೃ )