ಮೈಸೂರು: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ್ ರೈತರ ಮುಖಂಡರಿಂದ ಸರ್ಕಾರ ದಿವಾಳಿಯಾಗಿದೆ ಎಂದು ಭಿಕ್ಷಾಟನೆ ಮಾಡಿ ದೇಣಿಗೆ ಸಂಗ್ರಹ.
ಹಾಲು, ಮೊಸರು, ಗ್ಯಾಸ್, ಡೀಸೆಲ್, ಸ್ಯಾಂಪ್ ಪೇಪರ್, ಮತ್ತು ರೈತರ ಪೈಪ್, ವಿಧ್ಯತ್ ಯಂತ್ರೋಪಕರಣಗಳು ಸೇರಿದಂತೆ ದಿನ ನಿತ್ಯದ ವಸ್ತುಗಳ ಬೇಲೆ ಏರಿಕೆ ವಿರೊದಿಸಿ ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸರ್ಕಾರ ದಿನೇ ದಿನೇ ರೈತ ಮತ್ತು ಗ್ರಾಹಕರ ಮೇಲೆ ಹೆಚ್ಚಿನ ಬೇಲೆ ಏರಿಕೆ ಮಾಡುತ್ತಾ ಬರುತ್ತಿದ್ದು ಇದರಿಂದ ಜನಸಾಮಾನ್ಯರ ಮೇಲೆ ತುಂಬಾಹೊರೆ ಬಿದ್ದಂತ್ತೆ ಆಗಿರುತ್ತದೆ. ಅನಗತ್ಯವಾದ ಖರ್ಚಿಗೆ ಮಿತಿ ಮಿರೀದೆ ಬೆಲೆ ಏರಿಕೆ ಮಾಡಿರುವುದರಿಂದ ಸಾರ್ವಜನಿಕರು ರೈತರು ತುಂಬಾ ಸಂಕಷ್ಟಪಡುವಂತೆ ಮಾಡಿದೆ. ವಿದ್ಯತ್, ಹಾಲು, ಡೀಸೆಲ್, ರೇಟ್ ಜಾಸ್ತಿ ಆಗಿರುವುದರಿಂದ ರೈತರಿಗೆ ಗಾಯದ ಮೇಲೆ ಭರೆ ಏಳದಂತೆ ಆಗಿರುತ್ತದೆ ಆದ್ದರಿಂದ ಲೀಟರ್ ಹಾಲಿಗೆ 52 ರೂಪಾಯಿ ಗ್ರಾಹಕರಿಂದ ಪಡೆಯುತ್ತದ್ದು. ರೈತರಿಗೆ 32 ರಿಂದ 34 ರೂಪಾಯಿ ರೈತರ ಕೂಲಿ ಹುಲ್ಲು ಮತ್ತು ಕೈತಿಂಡಿಗೆ ಸಾಕಾಗುವುದಿಲ್ಲ ಆದ್ದರಿಂದ 45 ರೂ ಪ್ರತಿ ಲೀಟರ್ ಹಾಲಿಗೆ ನೀಡಬೇಕು.
ಡೀಸಲ್ ಏಕರೆಗೆ ರೈತರಿಗೆ 1000 ರೂ ನೀಡಬೇಕು. ಈ ಹಿಂದಿನ ಸರ್ಕಾರ ರೈತರಿಗೆ 500 ರೂ ಡೀಸಲ್ ಧನ ನೀಡುತ್ತದ್ದರು.
- ಪ್ರಧಾನ ಮಂತ್ರಿಗಳ ಪಿ.ಎಂ.ಕೆ.ವಿ 6000 ರೂ ಜೊತೆಗೆ ರಾಜ್ಯ ಸರ್ಕಾರ 4000 ರೂ ಹಣವನ್ನು ರೈತರಿಗೆ ನೀಡಬೇಕು.
- ಆಕಾಲಿಕ ಮಳೆಗೆ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ತಕ್ಷಣ ನೀಡಬೇಕು.
- ಬಿತ್ತನೇಬೀಜ ಮತ್ತು ರಸಗೊಬ್ಬರವನ್ನು ಮುಂಗಾರುಮಳೆಯ ಪೂರ್ವದಲ್ಲೇ ಸಂಗ್ರಹಿಸಿಡಬೇಕು.
- ರೈತರ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಬೇಕು.
- ಪೂರ್ವ ಮುಂಗಾರು ಗುಡುಗು ಸಿಡಿಲಿಗೆ ಪ್ರಾಣಿ ಬಲಿಯಾದಲ್ಲಿ ತಕ್ಷಣ ಪರಿಹಾರ ನೀಡಬೇಕು.
- ಕಳೆದ ಮುಂಗಾರು ಮಳೆಯ ಸಮಯದಲ್ಲಿ ಬೆಳೆ ನಷ್ಟ ಪರಿಹಾರ ಇನ್ನೂ ನೀಡದಿರುವುದರಿಂದ ರೈತರಿಗೆ ಬಿತ್ತನೆಗೆ ತೋಂದರೆಯಾಗಿದ್ದು ತಕ್ಷಣ ಪರಿಹಾರ ನೀಡಬೇಕು.
- ರಾಜ್ಯದಲ್ಲಿ ತರಕಾರಿ ಮಾರುಕಟ್ಟೆಗಳಲ್ಲಿ ರೈತರಿಗೆ ಸರಿಯಾದ ಬೆಲೆ ನೀಡದೆ ದಲ್ಲಾಳಿಗಳೇ ಬೇಲೆಯನ್ನು ನಿಗದಿ ಪಡಿಸುತ್ತಿದ್ದು ಇದನ್ನು ಸರಿಪಡಿಸಬೇಕು.
- ರೈತರಿಗೆ ನೀಡುತ್ತಿರುವ ಹಾಲಿನಪೂತ್ಸಾಹಧನ ನೀಡಬೇಕು.
- ಪ್ರತಿ ಲೀ ಹಾಲಿಗೆ ರೈತರಿಗೆ 45 ರೂ ನೀಡಬೇಕು. ( ಕೇರಳ, ತಮಿಳುನಾಡು, ಆಂಧ್ರಪ್ರದೆಶ ದಲ್ಲಿ ನೀಡಲಾಗುತ್ತಿದೆ)
ಮೇಲಿನ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಪುರಸ್ಕರಿಸಿ ಸೂಕ್ತಬೆಲೆ ನೀಡಬೇಕು, ಎಂದು ಈ ಭಿಕ್ಷಾಟನೆ ದರಣಿಯನ್ನು ಹಮ್ಮಿಕೊಂಡಿದ್ದು, ಸರ್ಕಾರ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನದಿನ ಗ್ರಾಮ ಗ್ರಾಮಗಳಲ್ಲಿ ಬೀಕ್ಷಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಭಾರತೀಯ ಕಿಸಾನ್ ಸಂಘವು ಆಗ್ರಯಿಸುತ್ತದೆ.
ಈ ದರಣಿಯಲ್ಲಿ, ಅಧ್ಯಕ್ಷರಾದ ರಮೇಶ್ ರಾಜು, ಜಿಲ್ಲಾ ಅಧ್ಯಕ್ಷರಾದ ಪ್ರಭುಸ್ವಾಮಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರವಿ ಗಂಡತ್ತೂರು, ಚಂದ್ರೇಗೌಡ ಪಿ.ಸಿ. ಕೋಶಾಧ್ಯಕ್ಷರು, ತಾಲೂಕು ಅಧ್ಯಕ್ಷರುಗಳಾದ ಶಿವಕುಮಾರ್, ನಗರಗೆರೆ ಪ್ರಭುಸ್ವಾಮಿ, ಹೊಸಕೋಟೆ ಕುಮಾರ ನಾಯಕ, ಕಾರ್ಯದರ್ಶಿಗಳಾದ ಮಹೇಶ, ಪ್ರದಿಪ್, ಪರಮೇಶ, ಅಶೋಕ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.