ಬೈಲಹೊಂಗಲ: ತಾಲೂಕಿನ ಚಚಡಿ ಗ್ರಾಮದಲ್ಲಿ ವರ್ಧಮಾನ ಟೆಕ್ಸ್ಟೈಲ್ ಲಿಮಿಟೆಡ್ ಆಯೋಜಿಸಿದ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ನಡೆಸಿಕೊಟ್ಟ ಮಹಿಳಾ ಉದ್ಯಮ ಶೀಲತೆ ತರಬೇತಿ ಕುರಿತು ಒಂದು ದಿನದ ಕಾರ್ಯಾಗಾರ ಜರುಗಿತು.
ಕಾರ್ಯಾಗಾರದ ಉದ್ಘಾಟನೆಯ ನಂತರ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಸುರೇಖಾ ಪಾಟೀಲ ಅವರು ಫಲಾನುಭವಿಗಳಿಗೆ ಸಣ್ಣ ಉದ್ಯಮದ ಬಗ್ಗೆ, ಉದ್ಯಮಸ್ಥರು ಹೊಂದಿರಬೇಕಾದ ಗುಣಗಳು, ಪ್ಯಾಕಿಂಗ್, ಲೇಬಲಿಂಗ್, ಮಾರ್ಕೆಟಿಂಗನ ಜೊತೆಗೆ, ಉಪ್ಪಿನಕಾಯಿ ಹಾಕುವುದರಿಂದ ಹಿಡಿದು ಇತರ ಸ್ವಯಂ ಉದ್ಯಮಶೀಲತೆಯ ಬಗ್ಗೆ ತರಬೇತಿ ನೀಡಿದರು.
ಎಲ್ಲ ಫಲಾನುಭವಿಗಳು ಕಾರ್ಯಾಗಾರದ ಉಪಯೋಗವನ್ನ ಪಡೆದು ಈ ಕಾರ್ಯಾಗಾರದಲ್ಲಿ ಅತೀ ಉತ್ಸಾಹದಿಂದ ಭಾಗವಹಿಸಿದರು. ಅನಂತರ ಸಣ್ಣ ಉದ್ಯಮ, ಅದರ ಮಾರುಕಟ್ಟೆಯ ವ್ಯಾಪ್ತಿ ಹಾಗೂ ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸಕ್ಷಮರಾಗುವ ಬಗೆಯ ಕುರಿತು ತಿಳಿದುಕೊಂಡರು.
ಸ್ವಯಂ ಉದ್ಯಮಶೀಲತೆಯ ತರಬೇತಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಹಿಳಾ ಕಲ್ಯಾಣ ಸಂಸ್ಥೆ ಶಿವಬಸವ ನಗರ ಬೆಳಗಾವಿ
Contact No: 97-404-700-77