Live Stream

[ytplayer id=’22727′]

| Latest Version 8.0.1 |

Local News

ಬೆಳಗಾವಿ: 286ನೇಯ ಮಾಸಿಕ ಶಿವಾನುಭವ ಮತ್ತು ವಿಶ್ವಗುರು ಬಸವಣ್ಣನವರ ಜಯಂತಿಯ ಆಚರಣೆ

ಬೆಳಗಾವಿ: 286ನೇಯ ಮಾಸಿಕ ಶಿವಾನುಭವ ಮತ್ತು ವಿಶ್ವಗುರು ಬಸವಣ್ಣನವರ ಜಯಂತಿಯ ಆಚರಣೆ

ಬೆಳಗಾವಿ: ನಗರದ ಶಿವಾನುಭವ ಮಂಟಪ, ಕಾರಂಜಿ ಮಠ, ಶಿವಬಸವ ನಗರದಲ್ಲಿ, 286ನೇಯ ಮಾಸಿಕ ಶಿವಾನುಭವ ಮತ್ತು ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.

ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರಂಜಿಮಠ ಶ್ರೀ .ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ಆಧುನಿಕ ದಾರ್ಶನಿಕರು, ಆದರೆ ಅವರ ಮುಂದಾಲೋಚನೆಯ ಗುಣಗಳು ಈಗಿನ ಕಾಲದ ಜನರಿಗೂ ಇಲ್ಲ. ಅವರು ಎಲ್ಲರನ್ನೊಡಗೂಡಿ ಸಮಾಜವನ್ನ ವೈಜ್ಞಾನಿಕ ತಳಹದಿಯ ಮೇಲೆ ಮುಂದು ಒರೆಸಿಕೊಂಡು ಹೋದರು ಎಂದು ಹೇಳಿದರು.

ತದನಂತರ, ಕಾರ್ಯಕ್ರಮದ ಉಪನ್ಯಾಸಕರಾದ,ಡಾ. . ನಾಗಲೋಟಿಮಠ ವಿಜ್ಞಾನ ಕೇಂದ್ರದ ನಿರ್ದೇಶಕರಾದ ರಾಜಶೇಖರ ಪಾಟೀಲ್ ಆವರು ಮಾತನಾಡಿ, 21ನೇ ಶತಮಾನದಲ್ಲಿ ಇದ್ದುಕೊಂಡು ನಾವು ಎಷ್ಟು ಮೂಢ ನಂಬಿಕೆಯನ್ನ ನಂಬತೀವಿ ಆದರೆ, ಬಸವಣ್ಣನವರು ಹಾಗೂ ಶರಣರು ವೈಜ್ಞಾನಿಕ ಹಿನ್ನಲೆ ಇಲ್ಲದ ಕಾಲದಲ್ಲಿಯೇ ಎಷ್ಟು ಮುಂದಾಲೋಚನೆಯಿಂದ ಯೋಚಿಸುತ್ತಿದ್ದರು ಎಂಬುದು ನೋಡಿದರೆ ಆಶ್ಚರ್ಯ ಆಗುತ್ತದೆ. ಮರಣ ದೋಷ, ಜನನ ದೋಷಗಳನ್ನ ನಾವು ನಂಬತೇವಿ. ಶನಿ ಕಾಟ ಗೃಹ ಕಾಟಗಳ ಬಗ್ಗೆ ನಂಬಂತೀವಿ. ಅಷ್ಟು ಮೈಲಿಗಳಷ್ಟು ದೂರವಿರುವ ಶನಿ ನಮ್ಮನ್ನೇ ಹುಡುಕಿಕೊಂಡು ಬಂದು ಕಾಡುವುದುಂಟೆ?. ಭಕ್ತಿ ಭಂಡಾರಿ ಬಸವಣ್ಣನವರು ಇದನ್ನೆಲ್ಲ ಖಂಡಿಸುತ್ತಾ ಬಂದರು. ಮೂಢ ನಂಬಿಕೆಯನ್ನು ನಂಬಬೇಡಿ, ಮೂಲ ನಂಬಿಕೆಯನ್ನು ನಂಬಿರಿ ಎಂದು ಹೇಳಿಕೊಟ್ಟವರು ಬಸವಣ್ಣನವರು. ದೇವರ ಬಗ್ಗೆ ಬಸವಣ್ಣನವರ ಪರಿಕಲ್ಪನೆ ಅದ್ಭುತವಾದುದು. ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ತನ್ನ ತಾನು ಅರಿತವನೆ ನಿಜವಾದ ದೇವರು ಎಂದು ಹೇಳಿದ್ದಾರೆ. ಅಂತಹ ಪರಿಕಲ್ಪನೆಗಳು ಇಂತಹ ಆಧುನಿಕ ಯುಗದಲ್ಲಿರುವ ನಮಗೂ ಸಹ ಇಲ್ಲ ಎಂದು ಹೇಳಿದರು.

ಸಂಧರ್ಭದಲ್ಲಿ, ವಿಶ್ರಾಂತ ಪ್ರಾಚಾರ್ಯರಾದ ಡಾ.ಗುರುಪಾದ ಘಿವಾರಿ, ಎಲ್ಲ ಶರಣ ಶರಣೆಯರು ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಚೇತನ . ಕುಲಕರ್ಣಿ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";