ಬೆಳಗಾವಿ: ನಗರದ ಹೊರವಲಯದಲ್ಲಿ ದರೋಡೆಕೋರರ ಕೃತ್ಯ ಬೆಳಕಿಗೆ ಬಂದಿದೆ. ಹೊಸ ವಂಟಮೂರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ–48ರ ಬಳಿಯ ಇಂಡಿಯಾ ಎಟಿಎಂ ಕೇಂದ್ರದಿಂದ ಕಳ್ಳರು ಎಟಿಎಂ ಯಂತ್ರವನ್ನೇ ಎತ್ತಿಕೊಂಡು ಪರಾರಿಯಾದ ಘಟನೆ ವರದಿಯಾಗಿದೆ.
ಮೂವರು ಕಳ್ಳರ ಗ್ಯಾಂಗ್ ತಳ್ಳುಗಾಡಿಯೊಂದನ್ನು ತೆಗೆದುಕೊಂಡೇ ಎಟಿಎಂ ಕೇಂದ್ರಕ್ಕೆ ಬಂದಿದ್ದರು. ಮೊದಲು ಅವರು ಸೆನ್ಸಾರ್ ಅಲಾರ್ಮ್ ಸಕ್ರಿಯವಾಗದಂತೆ ಯಂತ್ರದ ಭಾಗಗಳ ಮೇಲೆ ಕಪ್ಪು ಸ್ಪ್ರೇ ಸಿಂಪಡಿಸಿದರು. ನಂತರ ಸಂಪೂರ್ಣ ಎಟಿಎಂ ಯಂತ್ರವನ್ನೇ ನೆಲದಿಂದ ಜಾರಿಬಿಡಿಸಿ ತಳ್ಳುಗಾಡಿಯಲ್ಲಿ ಹಾಕಿಕೊಂಡು ಸುಮಾರು 200 ಮೀಟರ್ ದೂರಕ್ಕೆ ಸಾಗಿದರು.
ಅಲ್ಲಿಂದ ಪೂರ್ವನಿಯೋಜಿತವಾಗಿ ನಿಲ್ಲಿಸಿಕೊಂಡಿದ್ದ ವಾಹನಕ್ಕೆ ಯಂತ್ರವನ್ನು ಶಿಫ್ಟ್ ಮಾಡಿಕೊಂಡು ಸ್ಥಳದಿಂದ ವೇಗವಾಗಿ ಪರಾರಿಯಾದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಸಂಬಂಧ ಬೆಳಗಾವಿ ಗ್ರಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















