ಬೆಳಗಾವಿ: ಜಿಲ್ಲೆಯ ಗೋಕಾಕನ ಅಕ್ಕತಂಗೇರಹಾಳ ಗ್ರಾಮದ ಪ್ರತಿಭಾವಂತ ಕರಾಟೆ ಪಟು, ವೈಷ್ಣವಿ ಶಿವನಗೌಡಾ ನಿರ್ವಾಣಿ (16) ರಷಿಯಾದ ಉಜಕಿಸ್ಥಾನದಲ್ಲಿ ಮಂಗಳವಾರ ಜರುಗಿದ ಅಂತರ್ರಾಷ್ಟ್ರೀಯ ವಿಶ್ವ ಬಾಲಕಿಯರ ವೀರಾಗ್ರಣಿ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕವನ್ನ ಪ್ರತಿನಿಧಿಸಿ ಸ್ವರ್ಣ ಪಡೆದು ವಿಶ್ವ ವೀರಾಗ್ರಣಿ ಪಟ್ಟ ತನ್ನ ಮುಡಿಗೇರಿಸಿಕೊಂಡಿದ್ದಾಳೆ.
ಇಂಟರ್ ನ್ಯಾಶನಲ್ ಜೀತ್ ಕುನೆದೊ ಫೆಡರೇಶನ್ ನಿಂದ ಆಯೋಜಿಸಿದ, ಉಜಕಿಸ್ಥಾನ ಐಎಂ ಜಿಸಿ -2024ನ ವರ್ಲ್ಡ್ ಜೀತ್ ಕುನೆದೊ ಚ್ಯಾಂಪಿಯನ್ ಶಿಪ್ ಕರಾಟೆ ಸ್ಪರ್ಧೆ ಇದಾಗಿದೆ. ಮೊದಲಿನಿಂದಲೂ ಓದುವಿನೊಂದಿಗೆ ಆಟೋಟದಲ್ಲಿಯೂ ಆಸಕ್ತಿ ವಹಿಸಿದ್ದ ವೈಷ್ಣವಿ ಕರಾಟೆ ತನ್ನ ನೆಚ್ಚಿನ ಹವ್ಯಾಸವಾಗಿಸಿಕೊಂಡು, ಆ ಕ್ಷೇತ್ರದಲ್ಲಿ ಅಗಾಧ ಸಾಧನೆ ತನ್ನದಾಗಬೇಕೆಂಬುದು ಕನಸು ಕಂಡು ಆ ದಿಸೆಯಲ್ಲಿ ಹಗಲಿರುಳು ಶ್ರಮಿಸಿ ಈಗ ವಿಶ್ವ ಕರಾಟೆ ಬಾಲಕಿಯರ ವೀರಾಗ್ರಣಿ ಸ್ಪರ್ಧೆಯಲ್ಲಿ ಈ ಅಗಾಧ ಸಾಧನೆ ಮಾಡಿದ್ದು ಅತ್ಯಂತ ಖುಷಿ ತಂದಿದೆ ಎಂದು ಪತ್ರಿಕೆಗೆ ತನ್ನ ಸಂತಸ ಹಂಚಿಕೊಂಡಿದ್ದಾಳೆ.
ವೈಷ್ಣವಿ ಈ ಮೊದಲು ರಾಜ್ಯ ,ಅಂತರಾಜ್ಯ ಮಟ್ಟದ ಅನೇಕ ಕರಾಟೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸೈ ಎನ್ನಿಸಿಕೊಂಡಿದ್ದು, ಚೆನ್ನೈ, ದೆಹಲಿ, ಡೆಹರಾಡೂನ್, ಮೈಸೂರು,ಬೆಂಗಳೂರು ಸೇರಿದಂತೆ ದೇಶದ ಉದ್ದಗಲದ ಹತ್ತಾರು ಮೆಟ್ರೋಪಾಲಿಟನ್ ನಗರಗಳಲ್ಲಿಯ ಕರಾಟೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಇವಳ ಈ ವಿಶ್ವ ಮಾನ್ಯ ಸಾಧನೆಗೆ ಕುಂದರನಾಡಿನ ಕ್ರೀಡಾಭಿಮಾನಿಗಳಲ್ಲಿ ಅತ್ಯಂತ ಹರ್ಷ ವ್ಯಕ್ತವಾಗಿದೆ. ಇವಳು ಬೆಂಗಳೂರಿನ ಓಕಿನೋವಾ ಗೋಜುಕಾನ್ ಕರಾಟೆ ಶಾಲೆಯ ಎಸ್.ಸಿ.ದುರಾಯಿ ಅವರಲ್ಲಿ ವಿಶೇಷ ತರಬೇತಿ ಪಡೆದಿದ್ದು, ವೈಷ್ಣವಿ ಭಾರತೀಯ ಭೂ ಸೇನಾ ಪಡೆಯ ನಿವ್ರತ್ತ ಕ್ಯಾಪ್ಟನ್ ಶಿವನಗೌಡಾ ಮಲಗೌಡಾ ನಿರ್ವಾಣಿ ಅವರ ಏಕೈಕ ಸುಪುತ್ರಿಯಾಗಿದ್ದಾಳೆ.
ವೈಷ್ಣವಿ ಶಿವನಗೌಡಾ ನಿರ್ವಾಣಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯಿಂದ ಹೃತ್ಪೂರ್ವಕ ಅಭಿನಂದನೆಗಳು.💐💐