ಜೋಡಕುರಳಿ: ಗ್ರಾಮದ ಸುಕ್ಷೇತ್ರ ಶ್ರೀ ಸಿದ್ಧಾರೂಢ ಮಠದಿಂದ 09 ಏಪ್ರಿಲ್ 2025 ಬುಧವಾರದಂದು ಸಂಜೆ 6:00 ಗಂಟೆಗೆ ಜೋಡಕುರಳಿ ಸುಕ್ಷೇತ್ರ ಸಿದ್ಧಾರೂಢ ಮಠದ ವಿಶಾಲ ಆವರಣದ ಭವ್ಯ ವೇದಿಕೆಯಲ್ಲಿ , ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿಯ ವಿಶೇಷ ಸಾಧಕರನ್ನು ಗುರುತಿಸಿ ಅಂತಹ ಸಾಧಕರಿಗೆ ಶ್ರೀ ಸಿದ್ಧಾರೂಢ ಸ್ವಾಮಿ ಸದ್ಭಾವನ ಪ್ರಶಸ್ತಿ ಪ್ರಧಾನ ಮಾಡಿ ಸಾಧಕರನ್ನು ಪುರಸ್ಕರಿಸಲಾಗುತ್ತಿದ್ದು, ಈ ಬಾರಿ 2025 ನೇ ಸಾಲಿನ ಸದ್ಭಾವನ ಪ್ರಶಸ್ತಿಗೆ ಕಬ್ಬೂರು ಪಟ್ಟಣದ ಬೆಲ್ಲದ ಕುಟುಂಬದ ಸಾಧಕ ಸಹೋದರರಿಬ್ಬರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶ್ರೀ ಸಿದ್ಧಾರೂಢ ಸ್ವಾಮಿ ಸದ್ಭಾವನ ಪ್ರಶಸ್ತಿ ಪುರಸ್ಕೃತರು ಮಹೇಶ ಬ. ಬೆಲ್ಲದ ಕಬ್ಬೂರು
ಖ್ಯಾತ ಉದ್ಯಮಿಗಳು, ಬೆಂಗಳೂರು (100 ಶಾಲೆಗಳನ್ನು ದತ್ತು ತೆಗೆದುಕೊಂಡ ಶಿಕ್ಷಣ ಪ್ರೇಮಿಗಳು)
ಶ್ರೀಯುತ ಮಹೇಶ ಬ. ಬೆಲ್ಲದರು ‘ಹಳ್ಳಿಯ ವಿಚಾರಗಳ ಜಾಗತೀಕರಣ’ ಎಂಬ ಧೈಯ ವಾಕ್ಯದಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಔದ್ಯೋಗಿಕ ಪ್ರಗತಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಣ ಶಿಟ್ಟಿಯಾಗಿ ವಿಶ್ವ ಮಟ್ಟದ ಉದ್ಯಮಿಯಾಗಿ “ಕೌಸ್ತುಭ” ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಯುತ ಮಹೇಶರ ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆ-ಸೇವೆಗಳನ್ನು ಶ್ರೀ ಮಠವು ಪರಿಗಣಿಸಿ “ಶ್ರೀ ಸಿದ್ಧಾರೂಢ ಸ್ವಾಮಿ ಸದ್ಭಾವನ ಪ್ರಶಸ್ತಿ” ಪ್ರಧಾನಕ್ಕೆ ಶ್ರೀ ಮಹೇಶ ಅಣ್ಣಾರು ಆಯ್ಕೆಗೊಂಡಿರುತ್ತಾರೆ.
ಶ್ರೀ ಸಿದ್ಧಾರೂಢ ಸ್ವಾಮಿ ಸದ್ಭಾವನ ಪ್ರಶಸ್ತಿ ಪುರಸ್ಕೃತರು (ಜಲ ಯೋಗದ ಕ್ಷೇತ್ರ) ಡಾ. ಪ್ರಕಾಶ ಬ. ಬೆಲ್ಲದ ಕಬ್ಬೂರು (ಜಲಯೋಗದಲ್ಲಿ ವಿಶ್ವದಾಖಲೆ)
ಡಾ. ಪ್ರಕಾಶ ಬ. ಬೆಲ್ಲದ ಇವರು ಜಲಯೋಗದಲ್ಲಿ ಮಾಡಿರುವ ಸಾಧನೆಗಾಗಿ ಗೌರವ ಡಾಕ್ಟರೇಟದಂತಹ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಷ್ಠಾರಗಳನ್ನು ಪಡೆದುಕೊಂಡಿದ್ದಾರೆ. 73ನೇ ವಯಸ್ಸಿನಲ್ಲಿಯೂ ಇವರು ಮಾಡುವ ಜಲಯೋಗವನ್ನು ಯೋಗ ಕ್ಷೇತ್ರದಲ್ಲಿ ವಿಶೇಷ ಸಾಧನೆ ಎಂದು ಶ್ರೀ ಮಠವು ಪರಿಗಣಿಸಿ ಇವರಿಗೂ “ಶ್ರೀ ಸಿದ್ಧಾರೂಢ ಸ್ವಾಮಿ ಸದ್ಭಾವನ ಪ್ರಶಸ್ತಿ” ಲಭಿಸಿದೆ.
ಅನೇಕ ಪರಮ ಪೂಜ್ಯರುಗಳ, ಗುರು-ಹಿರಿಯರ, ಮುಖಂಡರುಗಳ, ಸಾವಿರಾರು ಭಕ್ತ ಸಮೂಹದಲ್ಲಿ ಈ ಇಬ್ಬರೂ ಸಾಧಕ ಸಹೋದರರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ. ಕಾರಣ ಅಭಿಮಾನದಿಂದ ಸಮಸ್ತರೆಲ್ಲರೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗೌರವ ಪೂರ್ವಕವಾಗಿ ಹೆಮ್ಮೆಯಿಂದ ಭಾಗವಹಿಸಲು ವಿನಂತಿ.