ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಆಗಷ್ಟ 9 ಮತ್ತು 10 ರಂದು ಕಲಬುರಗಿಯ ಶರಣಬಸವೇಶ್ವರ ವಿಶ್ವವಿದ್ಯಾಲಯದಲ್ಲಿ ಜರುಗಿದ ಪ್ರಸಕ್ತ ಸಾಲಿನ 47ನೇ ಸರಣಿಯ ಪ್ರಾಜೆಕ್ಟಗಳ ಪ್ರದರ್ಶನದಲ್ಲಿ ಬೆಳಗಾವಿಯ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ, ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಶುಭಮ್ ರೆಡ್ಡಿ, ಐಶ್ವರ್ಯ ಸುಲಗೇಕರ, ಶಿವರಾಜ ಶೀಲವಂತ ಮತ್ತು ಸೈದಾ ಆಸರ್ ಅಂಜುಮ ವಿದ್ಯಾರ್ಥಿಗಳು ಭಾಗವಹಿಸಿ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ಗಳಿಸಿದ್ದಾರೆಂದು ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಆರ್ .ಪಟಗುಂದಿ ತಿಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ್ದ “ಭಾರತದ ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಹಾಗು ಸೌರಶಕ್ತಿ ಚಾಲಿತ ನೀರಿನ ನಿರ್ಜಲೀಕರಣ” ಎಂಬ ಈ ಯೋಜನೆಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ ಪ್ರಶಸ್ತಿ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಜಿ, ಸಂಸ್ಥೆಯ ಚೇರ್ಮನ್ ಡಾ. ಎಫ್.ವಿ.ಮಾನ್ವಿ, ಸಿ.ಎಸ್. ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್. ಹಲಕರ್ಣಿಮಠ, ಡಾ. ಅಶೋಕ ಹುಲಗಬಾಳಿ, ಡಾ. ಸಿದ್ರಾಮಯ್ಯ ಮಠದ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.