ಬೆಳಗಾವಿ: ನಗರದ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಬೆಳಗಾವಿ ವಿಭಾಗದ ಸಭಾಭವನದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಪತಂಜಲಿ ಯೋಗ ಶಿಕ್ಷಕರ ತರಬೇತಿ ಶಿಬಿರ, ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ, ಅಂತರಾಷ್ಟ್ರೀಯ ಯೋಗ ಗುರುಗಳು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಸಮಾರೋಪ ಗೊಂಡಿತ್ತು.
ಯೋಗ ಮಾರ್ಗದರ್ಶನ ಮತ್ತು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ರಾಜ್ಯ ಪ್ರಭಾರಿ ಭವರ ಲಾಲ್ ಆರ್ಯ ಅವರು ಮಾತನಾಡಿ, ಪ್ರತಿಯೊಬ್ಬರು ಪ್ರತಿದಿನ ಯೋಗ ಅಭ್ಯಾಸ ಮಾಡಬೇಕು. ಯೋಗ ಅಭ್ಯಾಸ ಮಾಡುವುದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಮುಂದುವರೆದು ನಾವು ಯೋಗವನ್ನು ಆಳವಾಗಿ ಸೂಕ್ತ ಗುರುಗಳ ಮುಖಾಂತರ ಕಲಿತು ಯೋಗ ಶಿಕ್ಷಕರಾಗಿ ನಮ್ಮ ಸುತ್ತಮುತ್ತಲಿನವರಿಗೆ ಯೋಗ ತರಬೇತಿ ನೀಡಿದರೆ ಸ್ವಸ್ಥ ಸಮಾಜವನ್ನು ನಾವು ನಿರ್ಮಿಸಬಹುದು. ನಿರೋಗಿಯಾಗಿರುವುದೇ ದೊಡ್ಡ ರಾಷ್ಟ್ರ ಸೇವೆ ಎಂಬ ಮಾತನ್ನು ಹೇಳಿದರು. ಪ್ರತಿ ಕುಟುಂಬದಲ್ಲಿ ಒಬ್ಬರು ಒಬ್ಬರು ಯೋಗ ಶಿಕ್ಷಕರ ಇರಬೇಕು ಆಗ ಸಂಪೂರ್ಣ ಕುಟುಂಬ ಪ್ರತಿ ಮನೆಯೇ ಆರೋಗ್ಯಯುತವಾಗಿರುತ್ತದೆ ಆರೋಗ್ಯಯುಕ್ತ ಜೀವನ ಶೈಲಿ ನಡೆಸಿದರೆ ಸಂಪೂರ್ಣ ಸಮಾಜವೇ ಆರೋಗ್ಯಮಯವಾಗುತ್ತದೆ, ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಈ ದಿಶೆಯಲ್ಲಿ ಪತಂಜಲಿ ಯೋಗ ಸಮಿತಿ ಬೆಳಗಾವಿ ಕಳೆದ ಒಂದು ತಿಂಗಳಿನಿಂದ ನೂರಾರು ಸಾಧಕರಿಗೆ ಯೋಗ ಶಿಕ್ಷಕರ ತರಬೇತಿ ನೀಡಿ ಅವರನ್ನು ಪರಿಪೂರ್ಣ ಯೋಗ ಶಿಕ್ಷಕರನ್ನಾಗಿ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಬೆಳಗಾವಿಯ ಜಿಲ್ಲಾ ಪ್ರಭಾರಿಗಳಾದ ಮೋಹನ್ ಬಾಗೇವಾಡಿ, ಭದ್ವಾಂಕರ್ ಕಂಡಾಗಲೇ, ರಮೇಶ್ ಮಹಡಿ, ಸಂಗೀತ ಕೋನ, ಕೊಟ್ಟಾರಿ ಹಲಕರ್ಣಿ, ವಿನಾಯಕ್ ಚಿಕ್ಕೋಡಿ, ಜಿಲ್ಲಾ ಸಂಯೋಜನಕರಾದ ಬಾಲಕೃಷ್ಣ ಕೊಳೇಕರ್, ಗೋಕಾಕ್ ತಾಲೂಕ ಪ್ರಭಾವಿಗಳಾದ ಎಲ್ಲಪ್ಪ ಕುರುಬಗಟ್ಟಿ, ಬೈಲಹೊಂಗಲದ ಖಾನಾಪುರದ ದೇಸಾಯಿ ಮುಂತಾದವರು ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.