ಬೆಳಗಾವಿ: ಜಿಲ್ಲೆಯ ಕುಡಚಿ ಗ್ರಾಮ ಪಂಚಾಯಿತಿ ಸದಸ್ಯ ಬಾಬಾಜಾನ್ ಖಾಲಿ ಮುಂಡಾಸೈ ಹುಟ್ಟುಹಬ್ಬವನ್ನು ಖಾಸಗಿ ಕಾರ್ಯಕ್ರಮವಲ್ಲದೇ, ಬದಲಾಗಿ ಗೂಂಡಾ ಶೈಲಿಯಲ್ಲಿ ಆಚರಿಸಿದ ಘಟನೆ ಬೆಳಕಿಗೆ ಬಂದಿದೆ.
ಬಾಬಾಜಾನ್ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಬಂದೂಕಿನಿಂದ ಗಾಳಿಗೆ ಗುಂಡು ಹಾರಿಸಿ ಭೀತಿ ಮೂಡಿಸಿದ್ದಾನೆ. ಈ ಪ್ರಕರಣದಲ್ಲಿ ಅತ್ಯಂತ ಶೋಕಾಸ್ಪದ ಸಂಗತಿಯೆಂದರೆ ಘಟನೆ ಸಂಭವಿಸಿದ ಸ್ಥಳ ಪಕ್ಕದಲ್ಲೇ ಪೊಲೀಸ್ ಠಾಣೆ ಇದ್ದರೂ ಕೂಡ ಆರೋಪಿಗೆ ಕಾನೂನು ಭಯವೇ ಇಲ್ಲದಂತೆ ವರ್ತನೆ ತೋರಿದ್ದಾನೆ.
ನಡು ರಸ್ತೆಯಲ್ಲಿ ಹಲವರು ಚಾಕು ಹಿಡಿದು ನಿಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳು ವೈರಲ್ ಆಗಿವೆ. ಗಂಭೀರ ಭೀತಿಯನ್ನು ಸೃಷ್ಟಿಸಿರುವ ಈ ದೃಶ್ಯಗಳನ್ನು ನೋಡಿದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಇಂಥ ಗೂಂಡಾ ವರ್ತನೆ ತೋರಿದ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ನಡೆದಿದ್ದು ಎರಡು ದಿನಗಳ ಹಿಂದಷ್ಟೆ ಆದರೆ ಈಗಲೇ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಗಮನಸೆಳೆದಿದೆ. ವಿಡಿಯೋ ಆಧಾರದ ಮೇಲೆ ಪೋಲೀಸರು ತಕ್ಷಣ ಕ್ರಮಕ್ಕೆ ಮುಂದಾಗಿ ಬಾಬಾಜಾನ್ ನನ್ನು ಬಂಧಿಸಿ ಕುಡಚಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಘಟನೆ ಮತ್ತೆ ಗ್ರಾಮ ಪಂಚಾಯಿತಿ ಸದಸ್ಯರ ಮೇಲಿನ ಭದ್ರತೆ, ನೈತಿಕತೆ ಮತ್ತು ಕಾನೂನು ಗೌರವದ ಬಗ್ಗೆ ಪ್ರಶ್ನೆ ಎಬ್ಬಿಸಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143