ಕನ್ನಡ ಸಾಹಿತ್ಯಕ್ಕೆ ಬೂಕರ್ ಗೌರವ ಪಡೆಯುವದರ ಮೂಲಕ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟ ಲೇಖಕಿ, ಹೋರಾಟಗಾರ್ತಿ, ವಕೀಲೆ ಬಾನು ಮುಷ್ತಾಕ್ ಇವರಿಗೆ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಪರವಾಗಿ, ಅಭಿನಂದನೆಗಳು.
2025ರ ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿ ಮೇ 20 ರ ರಾತ್ರಿ ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಗಿದೆ. ಬಾನು ಮುಷ್ತಾಕ್ ಅವರ ” ಎದೆಯ ಹಣತೆ ” ಕಥಾಸಂಕಲವನ್ನು ಕೊಡಗಿನ ದೀಪಾ ಭಸ್ತಿಯವರು ” ಹಾರ್ಟ್ ಲ್ಯಾಂಪ್ ” ಹೆಸರಿನ ಶೀರ್ಷಿಕೆಯ ಅಡಿ ಆಂಗ್ಲ ಭಾಷೆಯಲ್ಲಿ ಅನುವಾದಿಸಿದ್ದಾರೆ. ಲಂಡನ್ನಿನಲ್ಲಿ ನಡೆದ ಸಮಾರಂಭದಲ್ಲಿ 50,000 ಪೌಂಡ್ ಮೌಲ್ಯದ ಇಂಟರ್ ರ್ನ್ಯಾಷನಲ್ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಕೃತಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಬಾನು ಮುಷ್ತಾಕ್ ಅವರು ಈ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಗೆಲುವು ಎಂದು ಸಂತಸ ವ್ಯಕ್ತಪಡಿಸಿರುವುದು ಕನ್ನಡಕ್ಕೆ ಸಿಕ್ಕ ಗೌರವವಾಗಿದೆ. ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಇವರೀರ್ವರಿಗೂ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಅಭಿನಂದನೆಗಳು.