ಅಂಕಲಗಿ: ಗೋಕಾಕ್ ತಾಲೂಕಿನ ಶೀಗಿಹೊಳಿ ಗ್ರಾಮದಲ್ಲಿ ಶ್ರೀ ಬ್ರಹ್ಮದೇವರ ನೂತನ ದೇವಸ್ಥಾನ ಕಟ್ಟಡದ ಉದ್ಘಾಟನೆ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆಯ ವೈಭವಮಯ ಸಮಾರಂಭವು ಭಕ್ತಿಭಾವದಿಂದ ನಡೆಯಿತು.
ರವಿವಾರದಂದು ಬೆಳಗ್ಗೆ, ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬ್ರಹ್ಮದೇವರ ಮೂರ್ತಿಗೆ ಬಾಗ್ಯಸ್ವಾಗತ ನೀಡಲಾಯಿತು. ಗ್ರಾಮದ ತಾಯಂದಿರು ಕುಂಭಮೇಳದಲ್ಲಿ ಭಾಗವಹಿಸಿ ಧಾರ್ಮಿಕ ಉತ್ಸಾಹದಿಂದ ಮೂರ್ತಿಯನ್ನು ಊರಿಗೆ ಕರೆದುಕೊಂಡು ಬಂದರು.
ನಂತರ ಸಾಯಂಕಾಲದ ವೇಳೆ ಶಾಸ್ತ್ರಾನುಸಾರ ಜಲ ಶುದ್ಧಿ, ದಾನ್ಯ ಶುದ್ಧಿ ಹಾಗೂ ಮೂರ್ತಿಯ ಶುದ್ಧಿಕರಣ ಕಾರ್ಯವನ್ನು ನಡೆಸಲಾಯಿತು. ಪುರೋಹಿತ ವಿಶ್ವನಾಥ್ ಶ್ರೀಶೈಲ ಮಠಪತಿಗಳ ನೇತೃತ್ವದಲ್ಲಿ ಹೋಮ, ಹವನ ಹಾಗೂ ವಿವಿಧ ಪೂಜಾ ಕರ್ಮಗಳನ್ನು ಸೋಮವಾರ ಮುಂಜಾನೆ 8 ಗಂಟೆಗೆ ನೆರವೇರಿಸಲು ಯೋಜನೆ ರೂಪಿಸಲಾಯಿತು.
ಮಂಗಳವಾರ ಮುಂಜಾನೆ 2 ಗಂಟೆಗೆ ಪ.ಪೂ. ಶ್ರೀ ಅಮರ ಸಿದ್ದೇಶ್ವರ ಸ್ವಾಮಿಗಳು (ಅಂಕಲಗಿ ಕುಂದರಗಿ) ಹಾಗೂ ಪ.ಪೂ. ಪಟ್ಟದ ದೇವರು ಶ್ರೀಗಳು (ಪಾಶ್ಚಾಪುರ) ಆಗಮಿಸಿ, ತಮ್ಮ ಅಮೃತ ಹಸ್ತಗಳಿಂದ ಶ್ರೀ ಬ್ರಹ್ಮದೇವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಿದರು.
ಈ ಧಾರ್ಮಿಕ ಉತ್ಸವದಲ್ಲಿ ಗ್ರಾಮದ ತಾಯಂದಿರು, ಗುರುಹಿರಿಯರು, ಯುವಕರು ಮತ್ತು ಅಡವಿ ಸಿದ್ದೇಶ್ವರರ ಶರಣ ಬಳಗದ ಸದಸ್ಯರು ಭಕ್ತಿಭಾವದಿಂದ ಭಾಗವಹಿಸಿ ಬ್ರಹ್ಮದೇವರ ಆಶೀರ್ವಾದ ಪಡೆದರು.
ವರದಿ: ನಿಲೇಶ ಜಗಜಂಪಿ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143