ಬಾಗಲಕೋಟೆ: ಜಿಲ್ಲೆಯ ಜಮಖಂಡಿಯ ಪ್ರಸಿದ್ಧ ಹೊಸ ಬಬಲಾದಿ ಮಠದ ಸದಾಶಿವ ಹಿರೇಮಠ ಸ್ವಾಮೀಜಿ ಅವರನ್ನು ಬಹುಕೋಟಿ ರೂಪಾಯಿ ವಂಚನೆ ಆರೋಪದಡಿ ಸಿಐಡಿ ಅಧಿಕಾರಿಗಳುಬಂಧಿಸಿದ್ದಾರೆ.
ಬೆಳಗಾವಿಯ ಗೋಕಾಕ್ ನ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್‌ನಲ್ಲಿದ್ದ ಗ್ರಾಹಕರ ಹಣವನ್ನು ವಂಚಿಸಿದ ಆರೋಪದಡಿ ಇವರನ್ನ ಬಂಧಿಸಲಾಗಿದೆ. ಸ್ವಾಮೀಗೆ ಬ್ಯಾಂಕ್ ನಿಂದ ಕೆಲ ಅಧಿಕಾರಿಗಳೇ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು, ಆ ಹಣದಲ್ಲಿ ಸ್ವಾಮೀಜಿ ಮನೆ ಕೂಡ ಕಟ್ಟಿಸಿಕೊಂಡಿದ್ದಾರೆಂಬ ಆರೋಪವಿದೆ.
ಸದಾಶಿವ ಸ್ವಾಮೀ ಅವರನ್ನು ಶಹರ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದ್ದು, ಇನ್ನೇನು ಸ್ವಾಮೀ ಅವರನ್ನ ಕೋರ್ಟ್ ಹಾಜರುಪಡಿಸುವ ಸಾಧ್ಯತೆ ಇದೆ. ಕಾಲಜ್ಞಾನಿ ನುಡಿಯುವಲ್ಲಿ ಸ್ವಾಮೀ ಪ್ರಖ್ಯಾತಿ ಪಡೆದಿದ್ದರು ಎಂಬ ಮಾತಿದೆ. ಈಗ ತಮ್ಮದೇ ಭಾಗ್ಯ ಹೇಗೆ ತಿಳಿಯದೆ ಹೋದರೋ ದೇವರೇ ಬಲ್ಲ. ಸಧ್ಯ ಪ್ರಾಥಮಿಕ ಮಾಹಿತಿ ಪ್ರಕಾರ ರೂ.60 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆದಿದೆ ಎನ್ನಲಾಗುತ್ತಿದೆ.