ಯಮಕನಮರಡಿ: ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದಲ್ಲಿ ಜನಸಿ ಪ್ರಾಥಮಿಕ&ಪೌಡ ಶಿಕ್ಷಣ ಮುಗಿಸಿ ರೇಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಲಿತಾ ಲಕ್ಷ್ಮಣ ಬೆಳವಿ ಅವರು ಮಂಗಳೂರಿನಲ್ಲಿ ಜ. 9 ರಿಂದ 13 ರವರೆಗೆ ನಡೆದ ಅಂತರಾಷ್ಟ್ರೀಯ ಮಟ್ಟದ ಸೌಥ ಏಷಿಯಾ ಮಾಸ್ಟರ್ಸ ಅಥೆಟಿಕ್ ಓಪನ್ ಚಾ೦ಪಿಯನ್ ಶೀಪನಲ್ಲಿ 2025ರ ಕ್ರೀಡಾಕೂಟದಲ್ಲಿ 35 ರ ವಯೋಮಾನದ ಕ್ರೀಡೆಯಲ್ಲಿ ಭಾಗವಹಿಸಿ ಹ್ಯಾಮರ ಎಸೆತದಲ್ಲಿ ಕಂಚು ಪದಕ ಪಡೆಯುವ ಮೂಲಕ ಸಾಧನೆ ಮಾಡಿ ನಾಡಿಗೆ ಹೆಮ್ಮೆ ತಂದಿದ್ದಾರೆ.
ಈಗಾಗಲೇ ಇವರು ಹಲವಾರು ಬಾರಿ ರಾಜ್ಯ ಮತ್ತುರಾಷ್ಟ್ರ ಮಟ್ಟದ ಅಥ್ಲೆಟಿಕ್ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲೂ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆ ಕಂಡು ಮುಂದಿನ ಕ್ರೀಡೆಗಳಲ್ಲಿ ಭಾಗಿಯಾಗಿ ಹೆಚ್ಚಿನ ಸಾಧನೆ ಮಾಡಬೇಕೆಂದು ನಮ್ಮೂರ ಧ್ವನಿ ಸುದ್ಧಿ ವಾಹಿನಿಯ ವತಿಯಿಂದ ಶುಭ ಹಾರೈಸುತ್ತೇವೆ.