ಹುಕ್ಕೇರಿ: ತಾಲೂಕಿನ ಯಮಕನಮರಡೀ ಗ್ರಾಮದಲ್ಲಿ ಫೆಬ್ರವರಿ 23ರಂದು ನಡೆಯಲಿರುವ ಹುಕ್ಕೇರಿ ತಾಲೂಕಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಹತ್ತರಗಿ ಹರಿಮಂದಿರದ ಡಾ.ಆನಂದ ಮಹಾರಾಜ ಗೋಸಾವಿ ಅವರು ಕರೆ ನೀಡಿದರು.
ಅವರು ಶನಿವಾರ ದಿನಾಂಕ 15 ರಂದು ಯಮಕನಮರಡಿ ಹುನಶಿಕೊಳ್ಳ ಮಠದಲ್ಲಿ ನಡೆದ ಹುಕ್ಕೇರಿ ತಾಲೂಕಾ 12 ನೇ ಸಿದ್ಧತೆ ಕುರಿತು ಕರೆದಿದ್ದ ಪೂರ್ವಿಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅವಲಕ್ಕಿ ಮಾತನಾಡಿ ಸಮ್ಮೇಳನದ ದಿನ ನಡೆಯಬೇಕಾದ ಕಾರ್ಯ ಕಲಾಪಗಳ ಕುರಿತು ವಿವರಿಸಿದರು. ಸಭೆಯಲ್ಲಿ ಯಮಕನಮರಡಿ ಹುಣಸಿಕೊಳ್ಳ ಮಠದ ಶ್ರೀ ಸಿದ್ದಬಸವ ದೇವರು, ಎಲ್. ವ್ಹಿ. ಪಾಟೀಲ, ಸ್ವಾಗತ ಸಮೀತಿ ಅಧ್ಯಕ್ಷ ಕಿರಣಸಿಂಗ ರಜಪೂತ,ಉಪಾಧ್ಯಕ್ಷ ವಿರಣ್ಣಾ ಬಿಸಿರೊಟ್ಟಿ, ಕಾರ್ಯದರ್ಶಿ ರವೀಂದ್ರ ಜಿಂಡ್ರಾಳಿ, ಬಾಬು ನಾಯಿಕ, ಪ್ರಕಾಶ ಹೊಸಮನಿ,ಬೆಳಗಾವಿ ಜಿಲ್ಲಾ ಕ. ರ. ವೇ ಉಪಾಧ್ಯಕ್ಷ ರಾಜು ನಾಶಿಪುಡಿ. ವಿನೋದ ಜಗಜಂಪಿ ಸಾಹಿತಿ ಎನ್. ಎಸ್. ದೇವರಮನಿ,ಕಿರಣ ನೇಸರಿ,ಮಾರುತಿ ಬುಕ್ಕನಟ್ಟಿ, ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲ ಚಿಪಣಿ,ಅನುರಾಧ ಇನ್ನಿತರರು ಉಸ್ಥಿತರಿದ್ದರು.