ಬೆಳಗಾವಿ: ಕರ್ನಲ್ ಸೋಫಿಯಾ ಖುರೇಷಿ ಮನೆಯ ಮೇಲೆ ಆರ್ ಎಸ್ ಎಸ್ ಹಾಗೂ ಹಿಂದುಗಳು ಧ್ವಂಸ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಿದ್ದ ಅನೀಸ್ ಉದ್ದೀನ್ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಒಂದು ಫೋಟೊ ಬಳಿಸಿ ಪೋಸ್ಟ್ ಮಾಡಿದ್ದ ಅನೀಸ್ ಉದ್ದೀನ್. ಕೂಡಲೇ ಆ ಪೋಸ್ಟ್ ಡಿಲಿಟ್ ಮಾಡಿಸಿದ್ದ ಬೆಳಗಾವಿ ಪೊಲೀಸರು, ಕೆನಡಾದಲ್ಲಿ ಕುಳಿತು ಪೋಸ್ಟ್ ಮಾಡಿದ್ದ ಅನೀಸ್ ವಿರುದ್ಧ ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಲಾಗಿತ್ತು.
ಬಿಎನ್‌ಎಸ್ ಕಾಯ್ದೆಯಡಿ 353(2), 192 ಸೆಕ್ಷನ್ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಟ್ವಿಟ್ ಮಾಡಿದ ಅನೀಸ್ ಉದ್ದೀನ್ ಕುರಿತು ಟ್ವಿಟರ್ ಲೀಗಲ್ ಸೆಲ್ ಗೆ ಮಾಹಿತಿ ಕೇಳಿದ್ದೇವೆ. ಆರೋಪಿ ಎಲ್ಲಿಯವನು ಎಂದು ಮಾಹಿತಿ ಸಿಗಲಿದೆ. ಅಕಸ್ಮಾತ್ ಆತ ಭಾರತದಲ್ಲಿದ್ದರೆ, ಆತನನ್ನು ಕೂಡಲೇ ಬಂಧಿಸುತ್ತೆವೆ. ಕೆನಡಾದಲ್ಲಿ ಕುಳಿತು ಕೃತ್ಯ ಮಾಡಿದ್ದರೆ ಭಾರತ ಸರ್ಕಾರಕ್ಕೆ ಮಾತನಾಡಿ ರಾಜ ತಾಂತ್ರಿಕವಾಗಿ ಕ್ರಮ ಕೈಗೊಳ್ಳುತ್ತೆವೆ. ಒಟ್ಟಿನಲ್ಲಿ, ಆತನ ವಿರುದ್ಧ 353,(2)192(a) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದರು.