ಯರಗಟ್ಟಿ :- ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆನಲ್ಲಿ ವಿಜೃಂಭಣೆಯ 78ನೇಯ ಸ್ವಾತಂತ್ರೋತ್ಸವ ದಿನಾಚರಣೆ ಜರುಗಿತು.ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಅಧ್ಯಕ್ಷ ಶಂಕರ್ ಚೌಗಲಾ ಧ್ವಜಾರೋಹನ ನಿರ್ವಹಿಸಿದರು.
ವಿವಿಧ ತಂಡಗಳಿಂದ ಕವಾಯಿತು ಲೇಜೀಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ಜರುಗಿದವು . ಶಾಲೆಯ ಮೈದಾನದಲ್ಲಿ ಬಿಡಿಸಿರುವ ಭಾರತ ನಕ್ಷೆಯದ್ದಕ್ಕೂ ಮಕ್ಕಳು ನಿಂತು ಸಂಭ್ರಮಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು . ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಭಾರತ ಸೇವಾದಳದ ವಿದ್ಯಾರ್ಥಿಗಳ ಪಥ ಸಂಚಲನ ಆಕರ್ಷಕವಾಗಿತ್ತು.
ಶಾಲಾ ಮಕ್ಕಳು ಅನೇಕ ದೇಶಭಕ್ತಿ, ನೃತ್ಯ ,ಭಾಷಣಗಳನ್ನು ಮಾಡಿ ರಂಜಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಗ್ರಾಮಸ್ಥರು ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಗೆ ಹೊಸದಾಗಿ ಬಂದ ಶಿಕ್ಷಕರನ್ನು ಸ್ವಾಗತಿಸಲಾಯಿತು. ಪ್ರಾರಂಭದಲ್ಲಿ ಪ್ರಾಂಶುಪಾಲರಾದ ಕಿರಣ್ ಚೌಗಲಾ ಸ್ವಾಗತಿಸಿದರು . ಉಪ ಪ್ರಾಂಶುಪಾಲರಾದ ಶ್ರೀಮತಿ ಎ. ಆರ್. ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಧ್ಯಾಯ ಶ್ರೀ ಎಸ್. ಎ. ಸರಿಕರ. ವಂದಿಸಿದರು. ಗ್ರಾಮ ಪ್ರಮುಖರಾದ ಶ್ರೀ ಸಿದ್ದಣ್ಣ ನೊಗಿನಿಹಾಳ, ಮಲ್ಲಿಕಾರ್ಜುನ ನಂದಗಾವಿ, ಹುಸೇನ್ ಮುಲ್ಲಾ, ಲಕ್ಕಪ್ಪ ಪೂಜೇರಿ, ಬಾಗೇವಾಡಿ, ದುರದುಂಡಿಗೌಡ ಪಾಟೀಲ, ಚಂದ್ರಶೇಖರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕರಾದ ಶ್ರೀ ಕೆ.ಎ.ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಪನ್ಯಾಸಕಿ ಶ್ರೀಮತಿ ಸುಪ್ರೀಯಾ ನಾಯಕ ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಶ್ರೀ ಬಡಿಗೇರ ಅಚ್ಚುಕಟ್ಟಾಗಿ ನಿರ್ವಹಿಸಿದರು.