ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ, ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಟೈಲರಿಂಗ್ ಹಾಗೂ ಕಂಪ್ಯೂಟರ್ ತರಬೇತಿ ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಏಕಲ್ ಸಂಸ್ಥೆಯ ಅಂಚಲ್ ಉಪಾಧ್ಯಕ್ಷರಾದ ಕುಂಟೆಗೌಡರವರು ಎಕ್ಕಲ್ ಗ್ರಾಮಸ್ಥನ ಫೌಂಡೇಶನ್ ಸಂಸ್ಥೆಯ ಇತಿಹಾಸ ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್ ಮಾತನಾಡಿ ಈ ರೀತಿಯ ತರಬೇತಿ ನೀಡುವುದರಿಂದ ಮಹಿಳೆಯರು ಸ್ವಉದ್ಯೋಗ ಮಾಡಲು ಸ್ವಾವಲಂಬನೆಯ ಬದುಕು ನಡೆಸಲು ಅನುಕೂಲವಾಗುತ್ತದೆ. ಜೊತೆಗೆ ಕಂಪ್ಯೂಟರ್ ಸಾಕ್ಷರತೆಯ ಬಗ್ಗೆ ಯುವಕ-ಯುವತಿಯರಿಗೆ ಕಂಪ್ಯೂಟರ್ ತರಬೇತಿ ಪಡೆಯುವುದರಿಂದ ತಡೆಯುತ್ತದೆ. ಏಕಲ್ ಗ್ರಾಮೋಥಾನ್ ಫೌಂಡೇಶನ್ ನ ಅನೇಕ ಯೋಜನೆಗಳ ಬಗ್ಗೆ ಹಾಗೂ ಅದರಿಂದ ಲಾಭ ಪಡೆದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ಕಲಿಕೆಯ ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಪ್ರೇಮ್ ಕುಮಾರ್ ಕರಿಮುದ್ದನಹಳ್ಳಿ, ಗ್ರಾಮದ ಮುಖಂಡರಾದ ವಿಜಯ ನಾರಾಯಣ ಗೌಡ, ಏಕಲ್ ಗ್ರಾಮೋತ್ಥಾನ ಪ್ರತಿಷ್ಠಾನದ ಗದ್ದಿಗೆ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್, ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಜಯಲಕ್ಷ್ಮಿ ಸದಸ್ಯೆ, ಗೋವಿತ್ ಕಿರಣ್ ರಾಜ್ಯ ಸಂಯೋಜಕರು, ಶ್ರೀಮತಿ ರಾಧಾಮಣಿ ಶಿಕ್ಷಕಿ, ಕುಮಾರಿ ಶಿಕ್ಷಕಿ, ಸಂಚಾಲಕ ಮಹದೇವಮ್ಮ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.