ಮೂಡಲಗಿ: ಇಲ್ಲಿನ ಶ್ರೀ ಶ್ರೀಪಾದಬೊಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮೂಡಲಗಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮೂಡಲಗಿಯವರಿಂದ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಕವಿ, ಕಾವ್ಯ, ಕುಂಚ, ಗಾಯನೋತ್ಸವ ಕಾರ್ಯವನ್ನು ಸ್ವಾಮಿ ವಿವೇಕಾನಂದರ ಪೂಜೆ ಮಾಡಿ ಜ್ಯೋತಿ ಬೆಳಗಿಸುವ ಮೂಲಕ ಆರಂಭಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಚಂದ್ರಶೇಖರ ಅಕ್ಕಿ ಅವರು ಮಾತನಾಡಿ, ಎಲ್ಲ ನವ್ಯ ಸಾಹಿತಿಗಳು ಕನ್ನಡ ಭಾಷೆಯ ಹಿರಿಮೆಯನ್ನ ಇನ್ನಷ್ಟು ಮೇಲೆ ತೆಗೆದುಕೊಂಡು ಹೋಗಲಿ ಎಂದು ಹಾರೈಸಿದರು. ಜೊತೆಗೆ ದ.ರಾ ಬೇಂದ್ರೆಯವರ ಹಾಗೂ ಕುವೆಂಪುರವರ ಸಾಹಿತ್ಯದ ಕೆಲವು ಭಾಗದ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಗಾಯಕರು, ಮತ್ತು ಚಿತ್ರ ಕಲೆಗಾರರು, ಭಾಗವಹಿಸಿದರು.
ಈ ಸಂದರ್ಭದಲ್ಲಿ, ಶ್ರೀ ಚಂದ್ರಶೇಖರ್ ಅಕ್ಕಿ, ಸಿದ್ರಾಮ್ ದ್ಯಾಗಾನಟ್ಟಿ, ಸಂಗಮೇಶ ಮುಜಗೋಂಡ, ಬಾಲಶೇಖರ್ ಬಂದಿ, ಮಹಾದೇವ ಜಿಡ್ಡಿಮನಿ, ಚಿದಾನಂದ್ ಹೂಗರ್, ಪ್ರಕಾಶ್ ಮೇತ್ರಿ ಅನೇಕ ಸಾಹಿತಿಗಳು ಉಪಸ್ಥಿತರಿದ್ದರು.