ಯಮನಕಮರಡಿ: ಛತ್ರಪತಿ ಶಿವಾಜಿ ಮಹಾರಾಜರ ತತ್ವ ಆದರ್ಶಗಳು ಇಂದು ದೇಶ ಎಲ್ಲಡೆ ಇತಿಹಾಸ ಪುಟದಲ್ಲಿ ನೋಡಿ ತಿಳಿದುಕೊಳ್ಳುವ ಕಾರ್ಯ ನಡೆಯಬೇಕಿದೆ ಎಂದು ಬೆಳಗಾವಿ ಮರಾಠಾ ಸಮಾಜದ ಯುವ ಮುಖಂಡ ಸನಿ ಮಹಾದೇವ ನರಗೋಳ ಹೇಳಿದರು.
ಅವರು ಇತ್ತೀಚೆಗೆ, ಸ್ಥಳೀಯ ಯಮಕನಮರಡಿ ಹತ್ತರಗಿ ಗ್ರಾಪಂ ವ್ಯಾಪ್ತಿಯ ಮರಾಠಾ ಸಮಾಜದ ಸಹಯೋಗದಲ್ಲಿ ಏರ್ಪಡಿಸಲಾಗದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಅಂಗವಾಗಿ ಮಾತನಾಡಿದ ಅವರು ಅಂದು ಶಿವಾಜಿ ಮಹಾರಾಜರಿಗೆ ಸಾಮಾಜ್ಯ ನಿರ್ಮಾಣ ಮಾಡಲು ಬಹಳಷ್ಟು ಕಷ್ಟಪಟ್ಟಿದ್ದಾರೆ ಅಂದು ತಂತ್ರಜ್ಷಾನ ಬೆಳದಿರಲ್ಲಿಲ್ಲ ಆದರೂ ಕುದುರೆ ಮೇಲೆ ಸವಾರಿ ಮೂಲಕ ಸಂದೇಶ ರವಾನೆ ಮಾಡಿ ಭಾರತ ದೇಶಕ್ಕಾಗಿ ಸತತ ಪರಿಶ್ರಮ ಮಾಡಿದ ಮಹಾನ್ ವ್ಯಕ್ತಿ ಶಿವಾಜಿಯವರು ಆದ್ದರಿಂದ ಇಂದಿನ ಸರ್ಧಾತ್ಮಕ ಯುಗದÀಲ್ಲಿ ಯುವಕರು ಮೊಬೈಲ್ ಹಾಗೂ ಟಿವಿ.ಗಳಲ್ಲಿ ಮೂಳಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವದು ವಿಷಾದನೀಯ ಸಂಗತಿ. ಯಮಕನಮರಡಿ, ಹತ್ತರಗಿ ಮರಾಠಾ ಸಮಾಜವು ಕಳೆದ ಮೂರು ವರ್ಷದಿಂದ ಶಿವಾಜಿ ಮಹಾರಾಜ ಜಯಂತಿ ಆರಂಭಿಸಿ ಬಡಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಕ್ರೀಡಾಪಟುಗಳಿಗೆ, ಶಿವಾಜಿ ಮಹಾರಾಜರ ಹೆಸರನಲ್ಲಿ ಪವಾಡ, ಶಿವ ಚರಿತ್ರೆ, ಕಿಲ್ಲೆಗಳ ಸ್ಪರ್ಧೆಗಳು ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ರೂಪಿಸಿ ಸಮಾಜದಲ್ಲಿ ತನ್ನಯಾದ ಅಸ್ತಿತ್ವವನ್ನು ಹೊಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಶಂಕರ ರಾಜಗೊಳಿ, ಪರಸು ಸೂಜಿ, ಸಂಭಾ ಶಿಂದೆ, ಶ್ರೀಕಾಂತ ನಿರ್ಮಳ, ಶ್ರೀಧರ ಗಂಭೀರ, ಉಮೇಶ ಗಂಭೀರ, ಸಿ.ಬಿ.ಕಂಗ್ರಾಳಕರ, ಕೇದಾರಿ ಶಿಂಧೆ, ರಾಮಾ ಶಿಂಧೆ, ಬಾಬುರಾವ ಸರನೋಬತ, ರೋಹಿತ ಶೇಲಾರ, ಪಾಪು ಶಿಂಧೆ, ನಾಗೇಶ ಸೂಜಿ, ಬಾಗೋಜಿ ಸೂಜಿ, ಮಾರುತಿ ಕಮ್ಮಾರ, ಸಂತೋಷ ಚಿಕ್ಕೋರ್ಡೆ, ಸಂದೀಪ ಕಾಳೆ, ಮಿಲಿಂದ ಶಿಂಧೆ, ಏಕನಾಥ ಬಡಿಗೇರ, ಕುಶಾಲ ರಜಪೂತ, ನಾರಾಯಣ ಕದಂ, ದತ್ತಾ ಪಾಟೀಲ ಹಾಗೂ ಹಲವಾರು ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮರಾಠಾ ಸಮಾಜದ ಮಹಿಳೆಯರು ಸೇರಿ ಶ್ರೀಂಗೇರಿ ಗುಡಿಯ ಸಭಾಭವನದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ತೊಟ್ಟಿನಲ್ಲಿ ಇರಿಸಿ ನಾಮಕರಣವನ್ನು ನಡೆಯಿತು ನಂತರ ಹಂಜಿ ಸಭಾಮಂಟಪದಲ್ಲಿ ಶಿವ ಚರಿತ್ರೆ, ದಾನಿಗಳ, ಮಾಜಿ ಸೈನಿಕರ, ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಯ ಸತ್ಕಾರ ಹಾಗೂ ರಂಗೋಲಿ, ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಣೆ ನಡೆದವು. ಸಂಜೆ ವೇಳೆ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆಯು ದಾದಬಾನಹಟ್ಟಿ ಸರ್ಕಲ್‌ನಿಂದ ಸಾಂಕೇತವಾಗಿ ಹಿರಿಯ ಮುಖಂಡರಿAದ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ವಾದ್ಯ ಮೇಳ, ಎರಡು ಕುದುರೆ ಎಲ್ಲರ ಗಮನ ಸಳೆದವು ಯಮಕನಮರಡಿ ಗ್ರಾಪಂ ಸರ್ಕಲ್, ಕಾಪಸಿ, ತುಬಚಿ ಕಾಲನಿ, ಯಲ್ಲಮ್ಮಾ ದೇವಸ್ಥಾನದ ಮೂಲಕ ಬಡಿಗೇರ, ಬಸದಿ ಸರ್ಕಲ್ ಮಾರ್ಗವಾಗಿ ಬಂದು ಮೆರವಣಿಗೆ ಕೊನೆಗೊಂಡಿತ್ತು.