ಯರಗಟ್ಟಿ: ಇಲ್ಲಿನ ಕೆಪಿಎಸ್ ಯರಗಟ್ಟಿ ಶಾಲೆಯ ಪುಟಾಣಿಯಾದ, ಕುಮಾರಿ ಪ್ರಾಪ್ತಿ ಮಂಜುನಾಥ ಚಕ್ರವರ್ತಿ ತನ್ನ ಭಾಷಣದ ಮೂಲಕ ಜನ ಮನ ಸೆಳೆದಳು.
76ನೇ ಗಣರಾಜ್ಯೋತ್ಸವದ ನಿಮಿತ್ಯವಾಗಿ ಆಯೋಜಿಸಿದ್ದ ಈ ಭಾಷಣ ಸ್ಪರ್ಧೆಯಲ್ಲಿ, ಯಾವುದೇ ರೀತಿಯ ವೇದಿಕೆಯ ಭಯವಿಲ್ಲದೆಯೇ ಲೀಲಾಜಾಲವಾಗಿ ಭಾಷಣವನ್ನ ಮಾಡಿ ಮೆಚ್ಚುಗೆಗೆ ಪಾತ್ರಳಾದಳು.
ಪ್ರಾಪ್ತಿಗೆ ಕೆಪಿಎಸ್ ಯರಗಟ್ಟಿಯ ಪ್ರಧಾನ ಗುರುಗಳಾದ ಸರೀಕರ್ ಅವರು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು. ಜೊತೆಗೆ ಪುಟಾಣಿ ಭಾಷಣಕ್ಕೆ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಎ. ಆರ್ ಮಠಪತಿರವರು 500 ರೂ., ಪ್ರಾಥಮಿಕ ಶಾಲೆಯ ಶಿಕ್ಷಕಿಯವರಾದ, ಶ್ರೀಮತಿ ಜವರಿ ಮೇಡಂ ಅವರು 500 ರೂ., ಚಿತ್ರಕಲಾ ಶಿಕ್ಷಕರಾದ ಶ್ರೀಮತಿ ರೇಶ್ಮಾ 500 ರೂ., ಗಂಡ್ರೋಳಿ 100 ರೂ. ಹಾಗೂ ಕರಗುಪ್ಪಿ ಶಿಕ್ಷಕರು 100 ರೂ. ಹೀಗೆ ವಿವಿಧ ಶಿಕ್ಷಕರು ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು.
ಜೊತೆಗೆ, ಕೆಪಿಎಸ್ ಯರಗಟ್ಟಿಯ ಶಾಲಾ ಶಿಕ್ಷಕರು, ಸಿಬ್ಬಂಧಿಗಳು ಹಾಗೂ ಸಹಪಾಠಿಗಳು ಅಭಿನಂದನೆ ಸಲ್ಲಿಸಿದರು.
ಕುಮಾರಿ ಪ್ರಾಪ್ತಿ ಚಕ್ರವರ್ತಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಹೃತ್ಪೂರ್ವಕ ಶುಭ ಹಾರೈಕೆಗಳು🎊🎉