ಯರಗಟ್ಟಿ : ಕರ್ನಾಟಕ ಪಬ್ಲಿಕ್ ಸ್ಕೂಲ್, ಯರಗಟ್ಟಿಯಲ್ಲಿ ಭಾರತ ಸೇವಾದಳ ಸ್ಥಾಪಕರಾದ ಡಾ. ನಾರಾಯಣ್ ಸುಬ್ಬರಾವ್ ಹರ್ಡೀಕರ ಅವರ ಪುಣ್ಯ ಸ್ಮರಣೆ ಕರ್ಯಭಕ್ರಮ ಅತಿ ವಿಜೃಂಭಣೆಯಿಂದ ಜರುಗಿತು . ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ಸೇವಾದಳ ಸಂಘಟಕರಾದ ಶ್ರೀಮತಿ ಅಶ್ವಿನಿ ಆಯಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ನಾ.ಸು. ಹರ್ಡೀಕರರವರ ಜೀವನ, ಅವರು ನಡೆದು ಬಂದ ದಾರಿ ಹಾಗೂ ಸಾಧಿಸಿದ ಸಾಧನೆ ಕುರಿತು ವಿವರಿಸಿ ಮಕ್ಕಳು ಸೇವಾ ಮನೋಭಾವನೆ ಮೂಡಿಸಿಕೊಳ್ಳಬೆಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಕಿರಣ ಚೌಗಲಾ ಮಾತನಾಡಿ ಜನರ ಸೇವೆಯೇ ದೇವರ ಸೇವೆ. ಮಕ್ಕಳು ಮನೆಗಳಲ್ಲಿ ತಂದೆ, ತಾಯಂದಿರ ಸೇವೆ ಮಾಡುವ ಮೂಲಕ ಶಾಲೆ, ಸಮಾಜದ ಸೇವೆಗೆ ಮುಂದಾಗಬೇಕೆಂದರು. ಉಪ ಪ್ರಾಂಶುಪಾಲರಾದ ಶ್ರೀಮತಿ ಎ.ಆರ್.ಮಠಪತಿ ಮುಖ್ಯಾಧ್ಯಾಪಕರಾದ ಎಸ್.ಎ.ಸರಿಕರ ಸೇವಾದಳದ ಉಸ್ತುವಾರಿ ಶಿಕ್ಷಕರಾದ ಶ್ರೀ ಪಿಎಸ್.ಪರಕನಹಟ್ಟಿ, ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ರಾಷ್ಟಿಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವು ನಡೆಯಿತು.
ಮಕ್ಕಳಿಂದ ಮನರಂಜನ ಕರ್ಯ ಕ್ರಮಗಳು ಅಂದರೆ ದೇಶಭಕ್ತಿ ಗೀತೆಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ, ಸೇವಾದಳ ಸ್ಥಾಪನೆಯ ಹಿನ್ನೆಲೆ ಹಾಗೂ ಭಾರತ ಸೇವಾದಳ ಸ್ಥಾಪಕರ ಕುರಿತಾಗಿ ಭಾಷಣ, ಸ್ವಯಂಸೇವಕರ ಮಾಡಬೇಕಾದ ಪ್ರತಿಜ್ಞೆ ಜೊತೆಗೆ ಕರ್ಯದಕ್ರಮದ ನಿರೂಪಣೆ ಎಲ್ಲವೂ ಮಕ್ಕಳಿಂದ ನಡೆದವು. ಒಟ್ಟಿನಲ್ಲಿ ಕಾರ್ಯಕ್ರಮ ಅತಿ ಉತ್ತಮವಾಗಿ ನಡೆಯಿತು