ಮಂದಕನಹಳ್ಳಿ (ಬೀದರ): ಹಳ್ಳಿಯ ಯುವಕ-ಯುವತಿಯರಿಗೆ ಡಿಜಿಟಲ್ ಸಾಕ್ಷರತೆ ತರಲು ಬೀದರಿನ ಎಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ‘ಏಕಲ್ ಆನ್ ಲೈನ್’ ವತಿಯಿಂದ ನಡೆಸಲಾಗುತ್ತಿರುವ ‘ಏಕಲ್ ಆನ್ ವೀಲ್ಸ್’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಳ್ಳಿಗಳಲ್ಲಿ ನೇರವಾಗಿ ಹೋಗಿ ಕಂಪ್ಯೂಟರ್ ಸಾಕ್ಷರತೆ ತರಬೇತಿ ನೀಡುವ ಈ ಮೊಬೈಲ್ ಲ್ಯಾಬ್, ಬಹುತೇಕ ಹಿಂದುಳಿದ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕೌಶಲ್ಯ ಕಲಿಸುತ್ತಿದೆ.
ಆಗಸ್ಟ್ 3, 2025ರಂದು, ಬೀದರ್ ತಾಲೂಕಿನ ಮಂದಕನಹಳ್ಳಿ ಗ್ರಾಮದಲ್ಲಿ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶಿವಶರಣಪ್ಪ ಚಿಟ್ಟ ವಹಿಸಿದ್ದರು. ಅವರು ಎಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಉದ್ದೇಶ ಹಾಗೂ ಯೋಜನೆಗಳ ಮಹತ್ವವನ್ನು ವಿವರಿಸಿದರು.
ಜಗನ್ನಾಥ ಭಂಗುರೆ ಸಮಾರಂಭದ ಪ್ರಸ್ತಾವಿಕ ನುಡಿಯನ್ನು ನೀಡಿದರು. ನಂತರ ರೋಟರಿ ಕ್ವೀನ್ ಕ್ಲಬ್‌ನ ವತಿಯಿಂದ ಆಗಮಿಸಿದ್ದ ಡಾ. ಜೈ ಶಾಲಿನಿ, ಡಾ. ಸಂಧ್ಯಾ ರೆಡ್ಡಿ ಮತ್ತು ಡಾ. ರುಚಿಕಾ ಶಾ ಅವರು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಂಚಲ್ ಸಮಿತಿಯ ನಿತೀಶ ಬಿರಾದಾರ್, ಸತೀಶ ಸ್ವಾಮಿ, ಗ್ರಾಮ ಪ್ರಮುಖರಾದ ಅಮೃತ್ ಎಸ್. ಲಕ್ಕಾ, ಅಭ್ಜಿತ್ ಮುಕ್ತಿದಾರ್, ಅಶೋಕ್ ತೆಲಂಗಾಣ, ಸೋಮನಾಥ ಸಂತಪುರೆ, ತುಕಾರಾಂ ಕುಂಬಾರ್, ನಾಗಪ್ಪ ದೇವಸ್ಥಾನದ ಅರ್ಚಕರಾದ ಪ್ರಭು, ಈರಣ್ಣ ನಿಂಗದಳ್ಳಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಏಕಲ್ ಕಾರ್ಯಕರ್ತರಾದ ಶ್ರುತಿ ಸ್ವಾಮಿ, ಮನೋಹರ್, ಚಿದಾನಂದ ಸಿಂಧೆ, ಶ್ರೀಹರಿ ಸತ್ಸಂಗದ ಪ್ರಮುಖರಾದ ಪ್ರಭು, ಅಂಬಿಕಾ (ಕಂಠಾಣ ಸಂಚ್), ಇ.ಒ.ಡಬ್ಲ್ಯೂ ಟ್ರೈನರ್ ಸುನಿಲ್ ಕುಮಾರ್ ಹಾಗೂ ಮಂದಕನಹಳ್ಳಿ ಏಕಲ್ ವಿದ್ಯಾಲಯದ ಆಚಾರ್ಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಬಸ್‌ನಲ್ಲಿ ಒಮ್ಮೆಕ್ಕೆ 18 ವಿದ್ಯಾರ್ಥಿಗಳು ತರಬೇತಿ ಪಡೆಯುವ ವ್ಯವಸ್ಥೆ ಇದ್ದು, ಪಠ್ಯಕ್ರಮದಲ್ಲಿ ಕಂಪ್ಯೂಟರ್ ಪರಿಚಯ, ಕೀಬೋರ್ಡ್ ಬಳಕೆ, MS Office, ಇಂಟರ್ನೆಟ್ ಬ್ರೌಸಿಂಗ್, ಡಿಜಿಟಲ್ ಬ್ಯಾಂಕಿಂಗ್, ಉದ್ಯಮಶೀಲತೆ ಹಾಗೂ ಆರ್ಥಿಕ ಸಾಕ್ಷರತೆ ಮುಂತಾದವುಗಳನ್ನೊಳಗೊಂಡಿದೆ.
ಈ ವೇಳೆ ಖಾಶಾಂಪುರ್, ಮರ್ಜಪುರ್, ಮಂದಕನಳ್ಳಿ, ಕಂಗನಕೋಟ ಗ್ರಾಮಗಳ ಆರು ಬ್ಯಾಚ್‌ಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೀದರ್ ಅಂಚಲ್ ಅಧ್ಯಕ್ಷ ರಾಜಕುಮಾರ್ ಅಳ್ಳೆ ಸಭೆಗೆ ಕೊನೆಗೆ ವಂದನೆ ಸಲ್ಲಿಸಿ, ಗಣೀಶ್ ಜೀ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಎಕಲ್ ಆನ್ ವೀಲ್ಸ್ ಯೋಜನೆಯು ಹಳ್ಳಿಗಳೆಲ್ಲೆಡೆ ತಂತ್ರಜ್ಞಾನ ಬೆಳಕು ಹರಡುತ್ತಿರುವ ಮಾದರಿಯಾಗಿದ್ದು, ಯುವಜನತೆಯ ಉಜ್ವಲ ಭವಿಷ್ಯ ನಿರ್ಮಾಣದತ್ತ ಮಹತ್ವದ ಹೆಜ್ಜೆ ಹಾಕಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143