ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕನೊಬ್ಬನನ್ನು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ಈ ಘಟನೆ ನಗರದ ಸಾಂಬ್ರಾ ರಸ್ತೆಯ ಅಮನನಗರ ಕ್ರಾಸ್ ಬಳಿಯಲ್ಲಿ ನಡೆದಿದೆ.
ಮಾ.ಮಾ.ಪೋಲೀಸ್ ಉಪನಿರೀಕ್ಷಕ (ಪಿಎಸ್‌ಐ) ಶ್ರೀಶೈಲ ಹುಲಗೇರಿ ನೇತೃತ್ವದ ಗಸ್ತು ತಂಡ ವೀಕ್ಷಣೆಯಲ್ಲಿ ಇರುವಾಗ, ಶಂಕಾಸ್ಪದವಾಗಿ ನಡೆದುಕೊಂಡ ವ್ಯಕ್ತಿಯೊಬ್ಬನು ಗಾಂಜಾ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಬಂಧಿತನನ್ನು ಚೂರಿಖಾನ್ ಶಪಿಯುಲ್ಲಾ ಮಹಮ್ಮದ್ ಗೌಸ್ (26) ಎಂದು ಗುರುತಿಸಲಾಗಿದ್ದು, ಗಾಂಜಾ ಸೇವನೆ ಸಂಬಂಧ ನಿಗದಿತ ವಿಧಾನದಡಿ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಮಾಳಮಾರುತಿ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಿಷಿದ್ಧ ವಸ್ತುಗಳ ಸೇವನೆ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸೂಚನೆ ನೀಡಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143