Live Stream

[ytplayer id=’22727′]

| Latest Version 8.0.1 |

Local NewsState News

ಕನ್ನೇರಿ ಶ್ರೀಗಳ ವಿವಾದಾತ್ಮಕ ಹೇಳಿಕೆ: “ಈ ಕಾವಿಧಾರಿಗಳು ಮಠಾಧೀಶರಲ್ಲ, ಬಸವ ತಾಲಿಬಾನಿಗಳು” 

ಕನ್ನೇರಿ ಶ್ರೀಗಳ ವಿವಾದಾತ್ಮಕ ಹೇಳಿಕೆ: “ಈ ಕಾವಿಧಾರಿಗಳು ಮಠಾಧೀಶರಲ್ಲ, ಬಸವ ತಾಲಿಬಾನಿಗಳು” 

 

ರಾಯಬಾಗ: ಕೊಲ್ಲಾಪೂರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತೊಮ್ಮೆ ವಿವಾದಕ್ಕೆ ಕಾರಣರಾಗಿದ್ದಾರೆ. ರಾಯಬಾಗ ಪಟ್ಟಣದಲ್ಲಿ ಭಜರಂಗ ದಳ ಆಯೋಜಿಸಿದ್ದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ, ಕಾವಿ ವಸ್ತ್ರ ಧರಿಸುವ ಕೆಲ ಮಠಾಧೀಶರನ್ನು “ಬಸವ ತಾಲಿಬಾನಿಗಳು” ಎಂದು ಉಲ್ಲೇಖಿಸಿ ಹೊಸ ಗಲಭೆಗೆ ಕಾರಣಕಾರರಾದರು.

ಕಾರ್ಯಕ್ರಮದಲ್ಲಿ ಜಮಾವಾದ ಸಭಿಕರ ಮುಂದೆ ಮಾತನಾಡಿದ ಸ್ವಾಮೀಜಿ, “ಹನುಮ ಮಾಲೆಯ ಬಗ್ಗೆ ಕೆಲವರು ಟೀಕೆ ಮಾಡಬಹುದು. ಕಮ್ಯುನಿಸ್ಟರು ಅಥವಾ ನಮ್ಮಂಥ ಕಾವಿ ಧರಿಸಿರುವ ಬಸವ ತಾಲಿಬಾನಿಗಳು ಮಾಲೆಗೆ ವಿರೋಧ ವ್ಯಕ್ತಪಡಿಸಬಹುದು,” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಮುಂದುವರಿದು, “ಕೈಯಲ್ಲಿ ಬಡಿಗೆ ಹಿಡಿದು ತಿರುಗಾಡೋದು ಇವರಿಗೆ ಇಷ್ಟವಿಲ್ಲ. ಅದನ್ನು ಬಿಟ್ಟು ಆರತಿ ತಟ್ಟೆ ಹಿಡಿದುಕೊಳ್ಳಬೇಕಾ? ನಮ್ಮ ಹುಡುಗಿಯರನ್ನು ಹೊತ್ತುಕೊಂಡು ಹೋಗುವವರನ್ನು ಕರೆದು ಆರತಿ ಬೆಳಗಬೇಕಾ? ಇಂತಹವರನ್ನು ಹಿಡಿದುಕೊಂಡು ಬಂದು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕು,” ಎಂದು ಸ್ವಾಮೀಜಿ ಕ್ಷುಬ್ಬುಗೊಂಡ ಶಬ್ದದಲ್ಲಿ ಹೇಳಿದರು.

ಸ್ವಾಮೀಜಿಗಳ ಈ ಹೇಳಿಕೆ ಸಾಮಾಜಿಕ ವಲಯದಲ್ಲಿ ಹಾಗೂ ಧಾರ್ಮಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಲಿಂಗಾಯತ ಮುನಿಗಳು ಹಾಗೂ ಮಠಾಧೀಶರ ಬಗ್ಗೆ ಇಂತಹ ಉಕ್ತಿಯು ಅಸಂತೋಷವನ್ನು ಉಂಟುಮಾಡಿದೆ.

ಕಾರ್ಯಕ್ರಮದ ನಂತರವೂ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಕನ್ನೇರಿ ಶ್ರೀಗಳು ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";