ಬೆಳಗಾವಿ: ಇಡೀ ವಿಶ್ವದಲ್ಲೇ ಭಾರತದ ಸಂಸ್ಕ್ರತಿಯು ಶ್ರೀಮಂತವಾದದ್ದು. ಇಂದಿನ ಪಾಶ್ಚಿಮಾತ್ಯ ಸಂಸ್ಕ್ರತಿಯ ಪ್ರಭಾವದಿಂದ ನಮ್ಮ ಜನಪದ ಸಂಸ್ಕ್ರತಿಯು ಮರೆಯಾಗುತ್ತಿದೆ. ಚೆಂದದ ಬೆನ್ನು ಹತ್ತಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೆವೆ, ಆದ್ದರಿಂದಲೇ ಇಂದಿನ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆಂದು ಸಿ.ಪಿ.ಆಯ್ ಜ್ಯೊತಿರ್ಲಿಂಗ ಹೊನಕಟ್ಟಿಯವರು ಅಭಿಪ್ರಾಯಪಟ್ಟರು.
ಪತಂಜಲಿ ಯೋಗ ಸಮಿತಿ ಬೆಳಗಾವಿಯು ಆಯೋಜಿಸಿದ್ದ 25 ದಿನಗಳ ವಿಶೇಷ ಯೋಗ ಶಿಕ್ಷಕರ ತರಬೇತಿ ಸಮಾರಂಭದ 9 ನೇ ದಿನದ ವಿಷೇಶ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಭಾರತೀಯ ಗ್ರಾಮೀಣ ಸೊಗಡಿನ ಸಂಸ್ಕ್ರತಿ, ಸಂಪ್ರದಾಯ, ಬಣ್ಣ ಬಣ್ಣದ ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮತನವನ್ನು ಉಳಿಸಿಕೊಳ್ಳಬೇಕು. ಯೋಗವು ಒಂದು ಧರ್ಮವಲ್ಲ ಅದು ದೇಹದಲ್ಲಿ ಆರೋಗ್ಯಕರ ಮನಸ್ಸಿನ ಗುರಿಯನ್ನು ಹೊಂದಿರುವ ಒಂದು ಜೀವನದ ವಿಧಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಜನಪದ ಗೀತೆ, ಭಕ್ತಿಗೀತೆ, ಭಜನಾ ಪದಗಳನ್ನು ಹಾಡಿ ಅದರಲ್ಲಿನ ಮಹತ್ವದ ಸಂದೇಶವನ್ನು ಮನಮುಟ್ಟುವಂತೆ ತಿಳಿಸಿದರು. ಆರೋಗ್ಯಕರ ಜೀವನ ನಡೆಸಲು ನೀರಿನ ಸೇವನೆ ಮತ್ತು ಅದರ ಮಹತ್ವವನ್ನು ವಿವರಿಸಿದರು.
ಸಮಾರಂಭದಲ್ಲಿ ಪತಂಜಲಿ ಯೋಗ ಸಮಿತಿಯ ಸಂಚಾಲಕರಾದ ಕಿರಣ್ ಮನ್ನೋಳಕರ್, ಮಹೇಶ್ ಬಾಗೇವಾಡಿ, ಪಟೇಲ್ ಗುರುಜಿ, ಬಾದ್ಪನಕರ, ರಮೇಶ್, ಶಂಕರ ಕುದನೂರಿ, ಪುಷ್ಪಾ ಕೋಡಾರಿ, ರಮೇಶ ಮಹಾಡಿಕರವರು ಉಪಸ್ಥಿತರಿದ್ದರು.