ಬೆಳಗಾವಿ: ಇಲ್ಲಿನ ವೈಭವ ನಗರದಲ್ಲಿ, ಇಷ್ಟೊಂದು ದುಬಾರಿ ಐಪೋನ್ ಯಾಕೆ ಎಂದು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ರಶೀದ್ ಶೇಖ್ (24) ಆತ್ಮಹತ್ಯೆಗೆ ಶರಣಾದ ಯುವಕ. 70 ಸಾವಿರ ಬೆಲೆಯ ಐಪೊನ್ ತಂದಿದ್ದ ರಶೀದ್ ಶೇಖ್. ಇಷ್ಟೊಂದು ದುಬಾರಿ ಪೋನ್ ಬೇಕಿತ್ತಾ ಎಂದು ತಂದೆ ಪ್ರಶ್ನಿಸಿ, ತಂದೆ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಮನೆಯ ಬೆಡ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.