Live Stream

[ytplayer id=’22727′]

| Latest Version 8.0.1 |

Local News

ಪ್ರತಿಭಾವಂತ ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಾಮಗ್ರಿಗಳ ದಾಸೋಹ ಸಮಾರಂಭ

ಪ್ರತಿಭಾವಂತ ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಾಮಗ್ರಿಗಳ ದಾಸೋಹ ಸಮಾರಂಭ

ಬೆಳಗಾವಿ: ನಗರದ ಬಸವನ ಕುಡುಚಿ, ದೇವರಾಜ ಅರಸ ಕಾಲನಿಯ ಶ್ರೀಮತಿ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದಲ್ಲಿ ಬೈಲಹೊಂಗಲದ ಪ್ರತಿಭಾವಂತ ವೈದ್ಯ ವಿದ್ಯಾರ್ಥಿಗಳಿಗೆ, ವೈದ್ಯಕೀಯ ಪುಸ್ತಕ,ಸಮವಸ್ತ್ರ ಹಾಗೂ ವೈದ್ಯಕೀಯ ಸಾಮಗ್ರಿಗಳ ದಾಸೋಹ ಸಮಾರಂಭ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸಿದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು, ಡಾ. ಮಹಾಂತೇಶ ರಾಮಣ್ಣವರ ಹಾಗೂ ಇತರ ಅತೀಥಿಗಳು ಸೇರಿ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನ ವಹಿಸಿದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ವೈದ್ಯ ವೃತ್ತಿ ಪವಿತ್ರವಾದ ವೃತ್ತಿ. ನೀವು ಇನ್ನೊಬ್ಬರ ಜೀವ ಹಾಗೂ ಜೀವನದ ರೂವಾರಿ ಆಗಿರುತ್ತೀರಿ. ಆದ್ದರಿಂದ ಸಮಾಜದ ಉತ್ತಮ ಪ್ರಜೆಯ ಜೊತೆಗೆ ಉತ್ತಮ ವೈದ್ಯರಾಗಿ ಜನರ ಸೇವೆಯಲ್ಲಿ ನಿರತರಾಗಿ ಎಂದು ತಿಳಿಸಿದರು.

ನಂತರ ಡಾ. ದತ್ತ ಪ್ರಸಾದ ಗೀಜರೆ, ಬಂಜೆತನ ಹಾಗೂ ಸ್ತ್ರೀ ರೋಗ ತಜ್ಞರು,ಮಾತನಾಡಿ ಇಂದು ಮಹಾತ್ಮಾ ಗಾಂಧೀ ಜಯಂತಿ, ಹಾಗಾಗಿ ಮಹಾತ್ಮಾ ಗಾಂಧೀಜಿಯವರ ತತ್ವದ ಹಾಗೆ ಆಹಿಂಸಾ ಪರಮೋ ಧರ್ಮ ಅಂತ ಹೇಳಬಹುದು. ಆದರೆ, ಈಗಿನ ಕೆಲವು ಪರಿಸ್ಥಿತಿಗಳನ್ನ ನೋಡಿದರೆ, ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಬರಲಿಕ್ಕೆ ಹೆದರುತ್ತಿದ್ದಾರೆ. ಆದರೆ ಇಷ್ಟೆಲ್ಲದರ ನಡುವೆ ನೀವು ಗುರಿ ಸಂಕಲ್ಪ ಇಟ್ಟು ಈ ವೃತ್ತಿಯನ್ನ ಆರಿಸಿದ್ದೀರಿ ತಮಗೆಲ್ಲ ಅಭಿನಂದನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ನಂತರ ಡಾ. ಪ್ರಶಾಂತ ಕಟಕೋಳ, ಕೈವಲ್ಯಮ್ ಯೋಗಾಶ್ರಮ ಜಾಂಬೋಟಿ ಅವರು ಮಾತನಾಡಿ, ಇನ್ನು ಮುಂದೆ ನಿಮ್ಮ ಜೀವನದ ಗುರಿ ಸ್ವೇಚ್ಚಾಚಾರಕ್ಕೆ ಅನುಮತಿ ಅಲ್ಲ, ಸ್ವಂತ ಅನುಶಾಸನಗಳನ್ನ ತೆಗೆದುಕೊಳ್ಳುವಂತಹ ಹಂತ, ಇಲ್ಲಿಯವರೆಗೆ ನಿಮ್ಮ ಜವಾಬ್ದಾರಿ ನಿಮ್ಮ ತಂದೆ ತಾಯಿಯರು ಹೊತ್ತಿದ್ದರು, ಇನ್ನು ಮುಂದೆ ನಿಮ್ಮ ನಿಮ್ಮ ಜೀವನದ ಜವಾಬ್ದಾರಿಯನ್ನ ನೀವೇ ಹೊರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ನಂತರ ಬೈಲಹೊಂಗಲದ ಪ್ರತಿಭಾವಂತ ವಿವಿಧ 26 ವೈದ್ಯ ವಿದ್ಯಾರ್ಥಿಗಳಿಗೆ, ವೈದ್ಯಕೀಯ ಪುಸ್ತಕ,ಸಮವಸ್ತ್ರ ಹಾಗೂ ವೈದ್ಯಕೀಯ ಸಾಮಗ್ರಿಗಳ ದಾಸೋಹ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ, ಡಾ. ಪ್ರಶಾಂತ ಕಟಕೋಳ ಕೈವಲ್ಯಂ ಯೋಗಾಶ್ರಮ ಜಾಂಬೋಟಿ, ಡಾ. ಬಸವರಾಜ ಕೋಟಿನತೋಟ ಮುಖ್ಯಸ್ಥರು, ಔಷಧ ಶಾಸ್ತ್ರ ವಿಭಾಗ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ, ಎಂ. ಎಸ್ ಚೌಗಲಾ ಸಂಯೋಜಕರು, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ, ಮಹೇಶ ಗುರನಗೌಡರ ಕನ್ನಡ ಪ್ರಾಧ್ಯಾಪಕರು, ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿ, ಸೋಮಶೇಖರ ಕಣಗಲಿ ಯುನಿವರ್ಸಲ್ ಬುಕ್ಸ್ & ಮೆಡಿಕಲ್ ಇಕ್ಯೂಪಮೆಂಟ್ಸ್, ಡಾ. ಮಹಾಂತೇಶ ರಾಮಣ್ಣವರ ಕಾರ್ಯದರ್ಶಿಗಳು, ಡಾ. ರಾಮಣ್ಣವರ ಟ್ರಸ್ಟ್, ಬೈಲಹೊಂಗಲ ಹಾಗೂ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕೆ.ಎಲ್.ಇ. ಶ್ರೀ ಬಿ.ಎಂ. ಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ, ಮಹಾಂತೇಶ ಶೀಲವಂತರ ಮಹಾಂತ ಟ್ರೇಡರ್ಸ್ ಬೈಲಹೊಂಗಲ, ಕಿರಣ ಎಂ. ಚೌಗಲಾ ಪ್ರಾಚಾರ್ಯರು, ಕೆ.ಪಿ.ಎಸ್.ಸಿ ಯರಗಟ್ಟಿ ಪಿ.ಯು ಕಾಲೇಜ್, ಸಮಸ್ತ 26 ಸನ್ಮಾನಿತ ವೈದ್ಯ ವಿದ್ಯಾರ್ಥಿಗಳು ಹಾಗೂ ಪೋಷಕರು, ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";