ಹುಕ್ಕೇರಿ : ತಾಲೂಕಿನ ಹಿಡಕಲ್ ಜಲಾಶಯದ ಹತ್ತಿರ, ಕೆ.ಆರ್.ಐ.ಸಂಸ್ಥೆಯ ಸಭಾಂಗಣದಲ್ಲಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು. ಮತ್ತು ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ಸಂಕೇಶ್ವರ. ಇವರ ಸಂಯುಕ್ತ ಆಶ್ರಯದಲ್ಲಿ ಘಟಪ್ರಭೆ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಡಾ.ಸಜ್ಜನ ಜಾನಪದ ಕಲೆ ಎಂಬುದು ವಸ್ತುವಿಗೆ ಮಾರಾಟವಾಗುವ ವಸ್ತುವಾಗಿದೆ.
ಸಮಾಜದಲ್ಲಿ ನಿಜವಾದ ಕಲಾವಿದರನ್ನು ಗುರುತಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ತದ ನಂತರ ಎಸ್.ಎಂ.ಶಿರೂರ ಮನುಷ್ಯನ ಜೀವನದ ಪ್ರತಿ ಹಂತದಲ್ಲೂ ಜಾನಪದ ಕಲೆ ಅಡಗಿದೆ ಎಂದು ಪ್ರಕಟಿಸಿದರು.
ಮುಂದೆ ಬಸವರಾಜ ಕಡಕಭಾಂವಿ ಅವರು ಜಾನಪದ ಕಲೆ ಇಂದು ನಶಿಸಿ ಹೋಗುತ್ತಿರುವುದು ವಿಷಾದಕರ ಸಂಗತಿ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಬಹಳ ಅಗತ್ಯವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಷೇಶವೆಂದರೆ ಜನರು ಮರೆತು ಹೋದ ಸಣ್ಣಾಟ ಪದಗಳಾದ ರಾಧಾಕೃಷ್ಣ ಪಾರಿಜಾತ ಮತ್ತು ಸಂಗ್ಯಾ ಬಾಳ್ಯಾ ಎರಡು ಕೂಡ ಕಾರ್ಯಕ್ರಮದ ರಮಣೀಯತೆಯನ್ನು ಹೆಚ್ಚಿಸಿದವು. ಹಾಗೂ ಹಾಡುಗಾರರು, ನಾಟಕಕಾರರು, ಮತ್ತು ನೃತ್ಯಗಾರರ ಕಾರ್ಯಕ್ರಮವನ್ನು ಇನ್ನಷ್ಟು ಮೆರಗುಗೊಳಿಸುವ ಮೂಲಕ ಕೀರ್ತಿಯನ್ನು ಸಹ ಹೆಚ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಜಾನಪದ ಸಾಹಿತ್ಯದ ವೈಭವ, ಹಿರಿಮೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಾನಪದ ಗಾಯನ, ಜಾನಪದ ನೃತ್ಯ, ನಾಡ ನುಡಿ, ಸನ್ನಾಟ ಪದಗಳು ಸೇರಿದಂತೆ ಮೊದಲಾದ ಕಲಾ ಪ್ರದರ್ಶನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಕೇಶ್ವರದ ಸಂಕೇಶ್ವರದ ಅಕ್ಕಮಹಾದೇವಿ ಕಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟಕರಾದ ಸುರೇಶ ಮಂಜರಗಿ ಹಾಗೂ ಸುಜಾತಾ ಮಂಜರಗಿ, ಹಿಡಕಲ್ ಜಲಾಶಯದ ಮುಖ್ಯೋಪಾಧ್ಯಾಯರಾದ ಹನುಮಂತರಾವ್ ನಾಗಪ್ಪ ಗೋಳ, ನಿವೃತ್ತ ಶಿಕ್ಷಕ ಬಿ.ಎಸ್.ಮಾನೆ, ಜಯಶ್ರೀ ಮತ್ತಿಕೊಪ್ಪ
ಗ್ರಾಮ ವಿವಿಧ ಸಂಘಗಳಿಂದ ಆಗಮಿಸಿದ ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಕರು ಮತ್ತು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸರ್.ಎಂ ವಿಶ್ವೇಶ್ವರಯ್ಯ ಶಾಲೆಯ ಶಿಕ್ಷಕಿ ಶ್ರೀಮತಿ ಕಸ್ತೂರಿ ಚೌಗಲಾ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರದ ಉಪನ್ಯಾಸಕರಾದ ಶ್ರೀ ಎ.ವೈ.ಸೋನ್ಯಾಗೋಳ ಸ್ವಾಗತಿಸಿ.