Live Stream

[ytplayer id=’22727′]

| Latest Version 8.0.1 |

Local NewsState News

ವಿಪತ್ತು ನಿರ್ವಹಣೆ: ಅಣಕು ಪ್ರದರ್ಶನ:

ವಿಪತ್ತು ನಿರ್ವಹಣೆ: ಅಣಕು ಪ್ರದರ್ಶನ:

ಹೈಡ್ರೋಜನ್ ಟ್ಯಾಂಕ್ ಸ್ಫೋಟ: ೨೫ ಕಾರ್ಮಿಕರ ರಕ್ಷಣೆ

ಬೆಳಗಾವಿ: ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾತ್ಮಕ ಅಣಕು ಪ್ರದರ್ಶನ ಶನಿವಾರ ಹುಕ್ಕೇರಿ ತಾಲೂಕಿನ, ಕಣಗಲಾ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ರುವ ಗೋಲ್ಡ್ ಪ್ಲಸ್ ಪ್ಯಾಕ್ಟರಿಯಲ್ಲಿ ನಡೆಯಿತು.

         ಗೋಲ್ಡ್ ಪ್ಲಸ್ ಪ್ಯಾಕ್ಟಲ್ಲಿ ಹೈಡ್ರೋಜನ್ ಟ್ಯಾಂಕ್ ಸ್ಫೋಟಗೊಂಡ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ವಿವಿಧ ಇಲಾಖೆಗಳು ಜಂಟಿಯಾಗಿ
ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಈ ಅಣಕು ಪ್ರದರ್ಶನವನ್ನು ಕೈಗೊಳ್ಳಲಾಯಿತು. ಹುಕ್ಕೇರಿ ತಹಶೀಲ್ದಾರರು ಹಾಗೂ ಅಗ್ನಿ ಶಾಮಕ ದಳದ ಅಧೀಕ್ಷಕ ಶಶಿಧರ್ ನೀಲಗಾರ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೋಡ ಇವರ ನಿರ್ದೇಶನದಂತೆ ಅಣಕು ಪ್ರದರ್ಶನ ಜರುಗಿತು.

         ಸನ್ನಿವೇಶದಲ್ಲಿ ಹೈಡ್ರೋಜನ್ ಟ್ಯಾಂಕ್ ಸ್ಫೋಟಗೊಂಡು ಪ್ರಯುಕ್ತ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ೨೫ ಜನ ಕಾರ್ಮಿಕರನ್ನು ರಕ್ಷಿಸುವುದು ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಕುರಿತು ಮೆಡಿಕಲ್ ಪೋಸ್ಟ್ ಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವುದು ಮತ್ತು ಹೆಚ್ಚಿನ ಚಿಕಿತ್ಸೆ ಮಾಡುವ ಅವಶ್ಯಕತೆ ಇದ್ದರೆ ಅವರನ್ನು ತಾಲೂಕು ಆಸ್ಪತ್ರೆಗೆ ಅಥವಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಕುರಿತು ಅಣುಕು ಪ್ರದರ್ಶನ ಮಾಡಲಾಯಿತು.

                ಅದರಂತೆ ಹೆಚ್ಚು ಗಾಯಗೊಂಡಿರುವ ೧೦ ಗಾಯಾಳುಗಳನ್ನು ಸಂಕೇಶ್ವರ ದಲ್ಲಿರುವ ಸರ್ಕಾರಿ ಆಸ್ಪತ್ರೆಗೆ, ಹಾಗೂ ೧೦ ಜನ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಮತ್ತು ೫ ಜನ ಸಣ್ಣ ಪ್ರಮಾಣದಲ್ಲಿ ಗಾಯಗೊಂಡ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ಮಾಡಲಾಯಿತು, ೨ ಕಾರ್ಮಿಕರು ಮರಣಹೊಂದಿದ್ದು ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

            ಈ ಅಣಕು ಪ್ರದರ್ಶನದಲ್ಲಿ, ಎಸ್.ಡಿ.ಆರ್.ಎಫ್ ಉಪ ಸಮಾಧಿಷ್ಟöçರಾದ ಶರಣಬಸವ, ಅಪರ ಜಿಲ್ಲಾ ಕುಟುಂಬ ಕಲ್ಯಾಣ್ ಅಧಿಕಾರಿ ಚಿಕ್ಕೋಡಿ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಗೋಲ್ಡ್ ಪ್ಲಸ್ ೨೦೦ ಸಿಬ್ಬಂದಿಗಳು, ೧೩ ಅಗ್ನಿಶಾಕದಳದ ಸಿಬ್ಬಂದಿಗಳು, ಎಸ್.ಡಿ.ಆರ್.ಎಫ್ ೧೬, ೩೦ ವೈದ್ಯಕೀಯ ಸಿಬ್ಬಂದಿ, ಕಂದಾಯ ಇಲಾಖೆಯ ೨೦ ಜನ ಸಿಬ್ಬಂದಿ ಅಣಕು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";