Live Stream

[ytplayer id=’22727′]

| Latest Version 8.0.1 |

Local News

ವಿದ್ಯುತ್ ಅಪಘಾತ ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ

ವಿದ್ಯುತ್ ಅಪಘಾತ ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ

 

ಗೋಕಾಕ: ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಿದರು.

ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ರೈತ ರಾಮಪ್ಪ ಅಪ್ಪಯ್ಯ ಪೂಜೇರಿ (ಡಿ.6) ಹಾಗೂ ನಲ್ಲಾನಟ್ಟಿ ಗ್ರಾಮದ ರೈತ ಲಕ್ಷ್ಮಣ ಹಣಮಂತ ಹರಿಜನ (ಸೆ.22) ಅವರು ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಮೃತರ ಕುಟುಂಬದ ವಾರಸುದಾರರಿಗೆ ತಲಾ ₹5 ಲಕ್ಷದಂತೆ ಒಟ್ಟು ₹10 ಲಕ್ಷ ಪರಿಹಾರ ಧನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಕೃಷಿ ಕಾರ್ಯಗಳಲ್ಲಿ ತೊಡಗುವಾಗ ರೈತರು ಹೆಚ್ಚಿನ ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ವಿದ್ಯುತ್ ಅಪಘಾತಗಳು ಆಕಸ್ಮಿಕವಾಗಿದ್ದು, ಮೃತಪಟ್ಟವರ ನಷ್ಟವನ್ನು ಭರಿಸಲಾಗದು. ಆದರೆ ಸರ್ಕಾರವು ನೀಡಿರುವ ಪರಿಹಾರ ಧನವನ್ನು ಕುಟುಂಬಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುತ್ತೆಪ್ಪ ಕುಳ್ಳೂರ, ಪರಸಪ್ಪ ಮೆಲ್ಮಟ್ಟಿ, ಬಸವರಾಜ ಕಸ್ತೂರಿ, ಅಶೋಕ ಪೂಜೇರಿ, ಅಡಿವೆಪ್ಪ ಕಂಕಾಳಿ (ಗೌಳಿ), ಬಸು ಗಲಗಲಿ, ಬಸು ಇಳಿಗೇರಿ ಸೇರಿದಂತೆ ಹೆಸ್ಕಾಂ ಅಧಿಕಾರಿಗಳಾದ ವಿ.ಬಿ. ಹಿರಡ್ಡಿ, ಕೆ.ಸಿ. ಧರ್ಮಾ ಹಾಗೂ ಬಿ.ಜಿ. ಬಡಿಗೇರ ಉಪಸ್ಥಿತರಿದ್ದರು.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";