ಮಹಿಳೆಯರು ಸ್ವಾವಲಂಬಿಗಳಾಗಬೇಕು; ಫಾದರ್ ಲೂರ್ಧ ಸ್ವಾಮಿ
ಹುಕ್ಕೇರಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು, ಶಿಕ್ಷಣ ಪಡೆಯಬೇಕು ಮತ್ತು ಸಮಾಜದಲ್ಲಿ ಮುನ್ನಡೆಸಬೇಕು ಎಂಬ ಸಂದೇಶವನ್ನು ಪಾದರ್ ಲೂರ್ಧ ಸ್ವಾಮಿ ಅವರು ಹರಡಿದರು.
ಹಿಡಕಲ್ ಡ್ಯಾಂ ಸಮೀಪದ ಸಂತ ಮಿಖಾಯಿಲ್ ಚರ್ಚ್ ವತಿಯಿಂದ ಆಶ್ರಯ ಪುನರ್ವಸತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾತನಾಡಿದರು.
ಈ ವೇಳೆ ಪುನರ್ವಸತಿ ಕೇಂದ್ರದ ಮಕ್ಕಳಿಗೆ ಪಾಠ್ಯಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. “ಶಿಕ್ಷಣದ ಮೂಲಕ ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು,” ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಕರ ಸಂಘದ ಪ್ರತಿನಿಧಿ ರಾಜು ತಳವಾರ ಅವರು, “ಅಂಧಕಾರದ ಮೌನವಿಲ್ಲದ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅನಿವಾರ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ನಾಗರಿಕರಾಗಬೇಕು,” ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಮುಖ್ಯ ಶಿಕ್ಷಕ ಡಿ.ಎಂ. ಹಜ್ಜೆ ಮಾತನಾಡುತ್ತಾ, ಪಾದರ್ ಲೂರ್ಧ ಸ್ವಾಮಿ ಮಕ್ಕಳಿಗೆ ನೀಡುತ್ತಿರುವ ಸಹಾಯ ಇತರರಿಗೂ ಮಾದರಿಯಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಕಾಂಚನಾ ಅಮತೆ ಮತ್ತು ಶ್ರೀಮತಿ ಶಿಲ್ಪಾ ದೇಸಾಯಿ ಅವರು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯವಾಗುವ ಯೋಜನೆಗಳು ಹಾಗೂ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಅವರು ಆಶ್ರಯ ಶಕ್ತಿ ಸದನದ ಫಲಾನುಭವಿಗಳಿಗೆ ಧೈರ್ಯ ಮತ್ತು ಸ್ಪೂರ್ತಿ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಸ್.ಎ. ಸರಿಕರ ಹಾಗೂ ನಿವೃತ್ತ ಯೋಧ ಕೆಂಪಣ್ಣ ತಳವಾರ ಅವರಿಗೆ ಸನ್ಮಾನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಸಪೇಟೆ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಮಾಳ್ಯಾಗೋಳ, ಸಮಾಜ ಸೇವಕ ಸುರೇಶ ಪವಾರ, ಲಕ್ಷ್ಮಣ ಪೂಜೇರಿ, ಪತ್ರಕರ್ತರು ಎ.ಎಂ. ಕರ್ನಾಚಿ, ನಿರಂಜನ ಶಿರೂರ, ಮುಖ್ಯ ಶಿಕ್ಷಕಿ ಶಶಿಕಲಾ ಮೇತ್ರಿ, ಬಂಡು ತಳವಾರ, ರಾಮಾಕಾಂತ ಶಿಂಧೆ, ಆಲ್ಬರ್ಟ್ ಬ್ರಿಟ್ಟೋ, ದ್ರಾಕ್ಷಾಯಣಿ ಹಿರೇಮಠ, ಮಂದಾಕಿನಿ ಹಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಫಲಾನುಭವಿಗಳು ಪ್ರಾರ್ಥನೆ ಸಲ್ಲಿಸಿದರು. ಸ್ವಾಗತ ಭಾಷಣವನ್ನು ಲಕ್ಷ್ಮಣ ಪೂಜೇರಿ ನೀಡಿದರು ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಸುಗಂಧಾ ಮೊಕಾಶಿ ನೆರವೇರಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143