ಯಮಕನಮರಡಿ :ರೋಟರಿ ಕ್ಲಬ್ ಗೋಕಾಕ್ ಹಾಗೂ ಕೆನಡಾ ದೇಶದವರ ಸಹಯೋಗದಲ್ಲಿ ಗೋಕಾಕದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರಗಿದ ಬಡ ವಿದ್ಯಾರ್ಥಿಗಳಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕಿನ ಪಾಶ್ಚಾಪುರದ ಸರಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಯ
27 ವಿದ್ಯಾರ್ಥಿ. ವಿದ್ಯಾರ್ಥಿನಿಯರಿಗೆ
ಪ್ರತಿಯೊಬ್ಬ ವಿದ್ಯಾರ್ಥಿಗೆ 3000 ರೂ. ಮೌಲ್ಯದ ಕಿಟ್ಟನ್ನು ಕೊಟ್ಟಿರುತ್ತಾರೆ.
ವಿದ್ಯಾರ್ಥಿಗಳಿಗೆ ಕಿಟ್ ನೀಡಲು ಪ್ರೋತ್ಸಾಹಿಸಿದ ಶಾಲೆಯ ಮಾಜಿ ವಿದ್ಯಾರ್ಥಿಯಾದಂತಹ ರಾಮಚಂದ್ರ ಕಾಕಡೆ ಇವರಿಗೆ ಎರಡು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು,ಉಪಾಧ್ಯಕ್ಷರು. ಸದಸ್ಯರು ಹಾಗೂ ಮಾಜಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಅವರ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದರು
ಈ ಕಾರ್ಯಕ್ರಮದಲ್ಲಿ ಶಾಲೆ ಮುಖ್ಯೋಪಾಧ್ಯಾಯರಾದ ಎಸ್ ಜಿ ಶಿಲೆದಾರ್ ಸರ್.ಹಾಗೂ ಶ್ರೀ ಎಲ್ಎಸ್ ಬುಲ್ಲಾರ್ ಸರ್. ಶ್ರೀಮತಿ ಎಸ್ ಎಸ್ ಅರಬಾವಿ ಮೇಡಂ. ಶ್ರೀ ಮಹೇಶ್ ಕೆಸರೂರ್ ಸರ್. ಹಾಗೂ ದೇಶಪಾಂಡೆ ಅವರು ಭಾಗವಹಿಸಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್