ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕರಿ ಮುದ್ದನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕನ್ನಡ ಶಾಲೆಯ ಗೆಳೆಯರು ತಂಡದಿಂದ ಜಾಮಿಟ್ರಿ ಬಾಕ್ಸ್ ಇತರೆ ಕಲಿತ ಸಾಮಗ್ರಿಗಳನ್ನು ವಿತರಿಸಲಾಯಿತು.
ಸರ್ಕಾರಿ ಶಾಲೆಯ ಗೆಳೆಯರು ತಂಡದಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಮಾಡಿದ್ದು, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಎಲ್ಲಾ ಸರ್ಕಾರಿ ಶಾಲೆ ತಲುಪಬೇಕು ಎಂಬ ಕನಸು, ಸಧ್ಯಕ್ಕೆ ಇವಾಗ ದೇವಗಳ್ಳಿ, ದೇವಲಾಪುರ, ಕುಟ್ಟವಾಡಿ, ಕರಿ ಮುದ್ದೇನಹಳ್ಳಿ ಈ ಗ್ರಾಮಗಳಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ನೇ ತರಗತಿಯ ಎಲ್ಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು, ಪೆನ್ಸಿಲ್ ಇತರೆ ಕಲಿತ ಸಾಮಗ್ರಿಗಳನ್ನು ವಿತರಿಸಲಾಯಿತು.
ಕನ್ನಡಕ್ಕಾಗಿ ಕನ್ನಡಮ್ಮನ ಸೇವೆಗಾಗಿ ಇರುವ ಕನ್ನಡ ಶಾಲೆಯ ಗೆಳೆಯರು ತಂಡದ ಜೀವಾಳವಾಗಿರುವ ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ಅಂಗವಾಗಿ,
ಈಗಾಗಲೇ ಅಭಿಯಾನಗಳನ್ನ ಯಶಸ್ವಿಯಾಗಿ ನಡೆಸುತ್ತ ಬರುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ವಿತರಿಸುವ ಮೂಲಕ ಅವರ ಓದಿಗಾಗಿ ಭವಿಷ್ಯಕ್ಕಾಗಿ ಸುಮಾರು 200 ಜನ ವಿದ್ಯಾರ್ಥಿಗಳಿಗೆ ದಾನಿಗಳ ಸಹಯೋಗದಲ್ಲಿ ಈ ಅಭಿಯಾನದ ನಡೆಸುತ್ತಾ ಬರುತ್ತಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಶಾಲೆಯ ಗೆಳೆಯರು ತಂಡದ ಸದಸ್ಯರಾದ ಶ್ರೀ ಗೋವಿತ್ ಕಿರಣ್, ಪ್ರಶಾಂತ್ ಹಿರೇಮಠ, ಶಾಲೆಯ ಮುಖ್ಯ ಶಿಕ್ಷಕರುಗಳು , ಎಸ್.ಡಿ.ಎಂ.ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.