ಹುಕ್ಕೇರಿ: ಸಂಗಮ್ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷರು, ಎಸ್ ಬಿ ಎಚ್ ಎಸ್ ಪ್ರೌಢಶಾಲೆಯ ಮಾಜಿ ಉಪಾಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶಂಕರ್ ರಾವ್ ಭಾಂದುರ್ಗೆ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ಯ ತಾಲೂಕಿನ ದಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಹಾಗೂ ಮರಾಠಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ಪೆನ್ಸಿಲ್ ಮತ್ತು ಅಂಕಲಪಿ ವಿತರಿಸಿದ ಅವರ ಪುತ್ರರಾದ ಸಂಪತ್ ರಾವ ಭಾಂದುರ್ಗೆ, ರಾಹುಲ್ ಭಾಂದುರ್ಗೆ ಅವರು ವಿತರಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಸಂಪತರಾವ ಭಾಂದುರ್ಗೆ, ನಮ್ಮ ತಂದೆಯವರು ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕರಾಗಿದ್ದರು ಅವರ ಸವಿ ನೆನಪಿನಗೋಸ್ಕರ ನಾವು ನಮ್ಮ ಗ್ರಾಮದ ಮೂರು ಶಾಲೆಯ ವಿದ್ಯಾರ್ಥಿಗಳಿಗೆ ಪೆನ್ ಅಂಕಲಪಿ ನೋಟ್ ಬುಕ್ ಮಾಡಿದ್ದೀವಿ ಎಂದರು ವಿದ್ಯಾರ್ಥಿಗಳಿಗೆ ಕಿವಿ ಮಾತ ಹೇಳಿದವರು ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಹಾಯಿಸದೆ ಶ್ರದ್ಧೆ ಹಾಗೂ ಛಲದಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಉನ್ನತ ಮಟ್ಟದ ವ್ಯಾಸಂಗ ಮಾಡಲು ಸಾಧ್ಯವಾಗುತ್ತದೆ ಎಂದರು. ಈ ಸಮಯದಲ್ಲಿ ಕಾವೇರಿ ಭಾಂದುರ್ಗೆ, ಪ್ರಮೋದಿನಿ ಭಾಂದುರ್ಗೆ, ರಾಮಚಂದ್ರ ರಾವಜಿಚೆ, ಶೀತಲ್ ರಾವಜಿಚೆ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್