ಯಮಕನಮರಡಿ: ಕೈ.ವಾ. ಪ್ರತಾಪ್ ನಾಗೇಶ್ ನಾಯಕ್ ಪ್ರಥಮ ಪುಣ್ಯ ಸ್ಮರಣೆ ನಿಮಿತ್ಯ ಅವರ ತಂದೆಯವರಾದ ನಾಗೇಶ್ ನಾಯಕ್ ಹಾಗೂ ಅವರ ಕುಟುಂಬಸ್ಥರಿಂದ ಇವತ್ತು ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಎಸ್ ಬಿ ಎಚ್ ಎಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ವಿತರಣೆ ಹಾಗೂ, ಗ್ರಾಮದ ಯುವಕರಿಗೆ ಟೀ ಶರ್ಟ್ ವಿತರಣೆ ಮಾಡಿ ಒಂದು ನಿಮಿಷ ಮೌನ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮಾಂತೇಶ್ ಪಾಟೀಲ, ಹಾಗೂ ವಿನೋದ್ ಪಾಟೋಳಿ, ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಭರಮಾ ಮಾಲಾಜಿ, ವಿಠ್ಠಲ್ ಪಾಟೀಲ, ಹಾಗೂ ಸಹ ಶಿಕ್ಷಕರು. ಮತ್ತು ಸಂದೀಪ್ ಮಾನೆ, ನಿಂಗಪ್ಪ ತೆಗ್ಗಿನಾಳಿ, ಭರಮಾ ನಾಯಕ, ಗೋಪಾಲ್ ನಾಯಕ, ಹಾಗೂ ಅವರ ಕುಟುಂಬಸ್ಥರು ವಾಲ್ಮೀಕಿ ಸಮಾಜದ ಜನತೆ ಉಪಸ್ಥಿತರಿದ್ದರು.