ಹುಕ್ಕೇರಿ: ತಾಲೂಕಿನ ಹುನ್ನೂರು ಮಾಸ್ತಿಹೊಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ೮,೯,೧೦ ತರಗತಿ ಮಕ್ಕಳಿಗೆ ಹಸಿ ಬಾಳೆಹಣ್ಣು ದಿನಂಪ್ರತಿ ನೀಡುತ್ತಿದ್ದಾರೆ ಇದ್ದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿಲ್ಲಾ ಎಂದು ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಮತ್ತು ಎಸ್‌ಡಿಎಂಸಿ ಸದಸ್ಯರಿಗೆ ಗಮನ ಸೆಳೆದರು. ತಕ್ಷಣವಾಗಿ ಮಕ್ಕಳ ಪಾಲಕರು, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಹಾಗೂ ಹಿರಿಯ ಮುಖಂಡರು ಸೇರಿ ಶಾಲೆಗೆ ದಿಢರಣೆ ಬುಧವಾರ ಹೋಗಿ ವಿರೋಧ ವ್ಯಕ್ತ ಪಡಿಸಿ ಆಕ್ರೋಶ ಹಾಕಿದರು.
ರಾಜ್ಯ ಸರ್ಕಾರವು ಪ್ರತಿಯೊಂದು ಮಗುವಿಗೆ ದಿನಕ್ಕೆ ೨ಬಾಳೆಹಣ್ಣು ನೀಡುವಂತೆ ಮಾಡಿದೆ ನಿಜ. ತಲಾ ಒಂದು ಬಾಳೆಹಣ್ಣಿಗೆ ೬ರೂ.ಗಳನ್ನು ನೀಡುತ್ತದೆ ಆದರೆ ಇಂದು ಶಾಲಾ ಮಕ್ಕಳಿಗೆ ಗುಣಮಟ್ಟದ ಬಾಳೆಹಣ್ಣು ಸಿಗದೆ ಇರುವದು ದುರಾದೃಷ್ಟ ಸಂಗತಿಯಾಗಿದೆ. ಹುನ್ನೂರು ಮಾಸ್ತಿಹೊಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ೩೪೫ಮಕ್ಕಳ ಕಲಿಯುತ್ತಿದ್ದಾರೆ. ಇಂತಹ ಹಸಿ ಬಾಳೆಹಣ್ಣು ನೀಡುತ್ತಿರುವ ಬಗ್ಗೆ ಅಲ್ಲಿಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಕೂಡ ಎಸ್‌ಡಿಎಂಸಿ ಸದಸ್ಯರಿಗೆ, ತಮ್ಮ ಪಾಲಕರಿಗೆ ಗಮನ ಹರಿಸದೆ ಇರುವದು ಮತ್ತಷ್ಟು ಆಕ್ರೋಶ ಕಾರಣವಾಯಿತು. ಇದು ಅಲ್ಲದೇ ಗುತ್ತಿಗೆದಾರಿಂದ ಒಂದೊoದು ದಿನ ಹಳಸಿದ ಬಾಳೆಹಣ್ಣು ಬರುತ್ತವೆ ಇದರ ಬಗ್ಗೆ ಯಾರು ಗುತ್ತಿಗೆ ಪಡೆದ ಮಾಲಿಕನ ಜೊತೆ ಮಾತನಾಡುತ್ತಿಲ್ಲಾ ಎಷ್ಟರ ಮಟ್ಟಿಗೆ ಕೆಳಮಟ್ಟದಿಂದ ಮೇಲಿನವರಗೆ ಹಣ ಸೋರಿಕೆಯಾಗುತ್ತಿದೆ ಯಕ್ಷಪ್ರಶ್ನೆಯಾಗಿ ಕಾಡ ತೋಡಗಿದೆ. ಯಾಕೆ ಬಡ ಮಕ್ಕಳೊಂದಿಗೆ ಚಲ್ಲಾಟ ಆಡುವದು ಇದು ಸರಿನಾ ಒಂದು ವೇಳೆ ಸರಿ ಇಲ್ಲದ ಬಾಳೆಹಣ್ಣು ವಿತರಣೆ ಮಾಡಿದರೆ ನಮ್ಮ ಮಕ್ಕಳಿಗೆ ಬಾಳೆಹಣ್ಣು ನೀಡುವದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.
ಗುತ್ತಿಗೆದಾರ ರಾಜು ಜೋಡಟ್ಟಿ ಇತನು ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ ತಾಲೂಕಿನ ಕೆಲವೊಂದು ಶಾಲೆಗಳಿಗೆ ಹಾಲು, ತತ್ತಿ, ಬಾಳೆಹಣ್ಣು ಈ ಪ್ರದಾರ್ಥಗಳನ್ನು ಸರಬುರಾಜು ಮಾಡುತ್ತಿದ್ದಾರೆ ಜೊತೆ ಹಸಿಬಾಳೆಹಣ್ಣು ಶಾಲಾ ಮಕ್ಕಳಿಗೆ ವಿತರಣೆ ಮಾಡುತ್ತಿರುವ ವಿರುದ್ದ ಕ್ರಮಗೊಳ್ಳಬೇಕೆಂದು ಮಕ್ಕಳ ಪಾಲಕರು ಆಗ್ರಹಿಸಿದರು. ಈ ವೇಳೆ ಹುನ್ನೂರ ಮಾಸ್ತಿಹೊಳಿ ಎಸ್‌ಡಿಎಂಸಿ ಅಧ್ಯಕ್ಷ ನಿಂಗನಗೌಡಾ ಪಾಟೀಲ ಎಸ್‌ಡಿಎಂಸಿ ಅಧ್ಯಕ್ಷರು, ಹಿರಿಯ ಮುಖಂಡ ನಿರಂಜನ ಮೋಕಾಶಿ, ಉದಯ ಹಿರೇಮಠ, ಮಲ್ಲಿಕಾರ್ಜುನ ಚೌಗಲಾ, ಬಸವರಾಜ ಮೋಶಿ, ಉದಯ ಹಿರೇಮಠ ಮುಂತಾದವರು ಮುಖಂಡರು ಇದ್ದರನ್ನು.
ವರದಿ:ಕಲ್ಲಪ್ಪ ಪಾಮನಾಯಿಕ್