ಯಮಕನಮರಡಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೈಹಿಕ ವಿಕಲಚೇತನರಿಗೆ 2023-24ನೇ ಸಾಲಿನ ಯಂತ್ರಚಾಲಿತ ದ್ವಿಚಕ್ರ ಯೋಜನೆಯಡಿ 20 ದ್ವಿಚಕ್ರ ವಾಹನಗಳನ್ನು ಗೋಕಾಕ ನಗರದ ಗೃಹಕಚೇರಿಯಲ್ಲಿ ಮಾನ್ಯ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ್ ಜಾರಕಿಹೊಳಿ ಅವರು ಮಂಗಳವಾರ ವಿತರಿಸಿದರು ಇದುವರೆಗೆ ಒಟ್ಟು 147 ವಾಹನಗಳು ಯಮಕನಮರಡಿ ಕ್ಷೇತ್ರದ ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಇನ್ನೂ 35 ವಾಹನಗಳು ಮಾರ್ಚ ಅಂತ್ಯದವರೆಗೆ ವಿತರಿಸಲಾಗುವುದು ಎಂದು ಹೇಳಿದರು.
ಈ ವಾಹನವನ್ನು ಬೇರೆಯವರಿಗೆ ಹಸ್ತಾಂತರಿಸದೇ ಅಥವಾ ವರ್ಗಾವಣೆ ಮಾಡದೇ ಸ್ವಂತಕ್ಕೆ ಮಾತ್ರ ಬಳಕೆ ಮಾಡಲು ಸೂಚಿಸಿದರು.
ಈ ವೇಳೆ ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಇಲಾಖೆಯ ಅಧಿಕಾರಿಗಳು ಹಾಗೂ ಯಮಕನಮರಡಿ ಮತಕ್ಷೇತ್ರದ ವಿವಿಧ ದೈಹಿಕ ವಿಕಲಚೇತನ ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ :ಎ. ವೈ. ಸೋನ್ಯಗೋಳ