ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುದಾನಿತ ಮಹಿಳಾ ಕಲ್ಯಾಣ ಸಂಸ್ಥೆಯ ಮೂಲಕ ನಿರ್ವಹಿಸಲ್ಪಡುವ ತೊಟ್ಟಿಲು ಮನೆಗೆ ಹೊಸ ಆಟಿಕೆ ಸಾಮಾನುಗಳು ಹಾಗೂ ಶೈಕ್ಷಣಿಕ ಸಲಕರಣೆಗಳನ್ನು ಜಿಲ್ಲಾ ಪಂಚಾಯತ್ ಬೆಳಗಾವಿ ವತಿಯಿಂದ ಒದಗಿಸಲಾಯಿತು. ಈ ಹೊಸ ಆಕರ್ಷಕ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಬುಧವಾರ ಜಿಲ್ಲಾ ಪಂಚಾಯತ್ ಕಚೇರಿ ಆವರಣದ ಶಿಶು ಪಾಲನಾ ಕೇಂದ್ರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, “ಮಕ್ಕಳಿಗಾಗಿ ಕಲಿಕೆ ಹಾಗೂ ಆಟದ ಸಹಾಯದಿಂದ ಗುಣಮಟ್ಟದ ಬೆಳವಣಿಗೆ ಸಾಧ್ಯ. ಈ ರೀತಿಯ ಉತ್ತಮ ಯೋಜನೆಗಳಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ,” ಎಂದು ಹೇಳಿದರು. ಜೊತೆಗೆ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಆರೋ ಯಂತ್ರ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಶಿಂಧೆ ಅವರು ತೊಟ್ಟಿಲು ಮನೆಯ ಎಲ್ಲಾ ಸೌಲಭ್ಯಗಳನ್ನು ಪರಿಶೀಲಿಸಿ, ಗುಣಮಟ್ಟದ ಬಗ್ಗೆ ಸಮೀಕ್ಷೆ ನಡೆಸಿದರು. ಮಕ್ಕಳೊಂದಿಗೆ ಸಂವಾದ ನಡೆಸಿ, ಕೆಲ ಸಮಯ ಕಳೆಯುವ ಮೂಲಕ ಸಭಿಕರ ಗಮನಸೆಳೆದರು.
ಈ ಸಂದರ್ಭದಲ್ಲಿ ಅಕೌಂಟ್ ಆಫೀಸರ್ ಶ್ರೀಮತಿ ಗಂಗಾ ಹಿರೇಮಠ, ಉಪಕಾರ್ಯದರ್ಶಿ 1 ಬಸವರಾಜ ಹೆಗ್ಗನಾಯಕ್, ಮ್ಯಾನೇಜರ್ ಬಸವರಾಜ ಮುರಗಾಮಠ, ಎಫ್‌ಡಿಎ ವಿಕ್ರಮ್ ಜಾಧವ್, ಮಹಿಳಾ ಕಲ್ಯಾಣ ಸಂಸ್ಥೆಯ ಶಾಹಿನ್ ಹೊಂಬಳ, ಶಿಶು ಪಾಲನಾ ಕೇಂದ್ರದ ಶಿಕ್ಷಕಿ ಭಾರತಿ ಪಾಟೀಲ್, ಸಹಾಯಕ ಸಿಬ್ಬಂದಿ ಸುಮಿತ್ರಾ ಇಂಗನಳ್ಳಿ ಹಾಗೂ ಜ್ಯೋತಿ ಗಂಜಿ ಸೇರಿ ಜಿಲ್ಲಾ ಪಂಚಾಯತ್‌ದ ಅನೇಕ ಸಿಬ್ಬಂಧಿ ವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143