Live Stream

[ytplayer id=’22727′]

| Latest Version 8.0.1 |

Local News

ಸ್ವಾತಂತ್ರೋತ್ಸವದಿಂದ ಜವಾಬ್ದಾರಿ ಮೆರೆಯಿರಿ, ಮರೆಯಬೇಡಿರಿ…!

ಸ್ವಾತಂತ್ರೋತ್ಸವದಿಂದ ಜವಾಬ್ದಾರಿ ಮೆರೆಯಿರಿ, ಮರೆಯಬೇಡಿರಿ…!

ನಮಸ್ಕಾರ ಸ್ನೇಹಿತರೆ, ನಾನು ನಿಮ್ಮ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ಜಾಕಿ ಕುಚಿಕು ಚೇತನ. ಇಂದು ಈ ಒಂದು ಅಂಕಣವನ್ನ ಬರೆಯಲಿಕ್ಕೆ ಮೂಲ ಕಾರಣ ಏನೆಂದರೆ, ನನಗಾದ ಕೆಲವು ಬೇಜಾರು.

ನಿನಗೆಂತ ಬೇಜಾರು ಸ್ವಾಮಿ ಅಂತ ತಾವು ಕೇಳೋದಾದರೆ, ನಾನು ಇಂದು ಮನೆಯಿಂದ ಆಫೀಸಿಗೆ ಬರುವಾಗ, ದಾರಿಯುದ್ದಕ್ಕೂ ನಾಳೆಯ ಅಂದರೆ, ಆಗಸ್ಟ್15ರ ಸ್ವಾತಂತ್ರೋತ್ಸವದ ಸಲುವಾಗಿ ತಯಾರಿಗಳು, ಎಲ್ಲೆಡೆ ಜೋರಾಗಿಯೇ ನಡೆಯುತ್ತಿತ್ತು.

 

ಈ ದೃಶ್ಯ ನೋಡಿದ ಎಂಥವರಿಗೂ ಒಂದು ಖುಷಿ ಹಾಗೂ ಹೆಮ್ಮೆ ಆಗುವುದಂತೂ ಖಂಡಿತ, ಆದರೆ ನಿನಗಿದರಲ್ಲಿ ಏನು ಬೇಜಾರಾಯಿತು? ಅಂತ ಕೇಳಿದರೆ, ನಮ್ಮ ಸಮಾಜದ ಬೇಜವಾಬ್ದಾರಿ ನೋಡಿ ಬೇಜಾರಾಯಿತು.

ಹೌದು, ಸ್ವಾತಂತ್ರೋತ್ಸವದ ಸಂಭ್ರಮ ಒಂದು ಕಡೆ, ಆದರೆ ಇದರ ಆಸರೆಯಲ್ಲಿ ಹೆಲ್ಮೆಟ್ ಇಲ್ಲದೆ ಗಾಡಿಗಳನ್ನ ಓಡಿಸುವುದು, ಜೊತೆಗೆ ಸ್ವಾತಂತ್ರೋತ್ಸವದ ತಯಾರಿಯ ನಂತರ ಅಳಿದುಳಿದ ಕಸವನ್ನ ಅಲ್ಲೇ ಬೀದಿ ಬದಿಯಲ್ಲಿ, ಅಥವಾ ಕೆಲವು ಮಹಾಶಯರಂತೂ ಇದ್ದಲ್ಲೇ ಬಿಟ್ಟು ಹೋಗಿದ್ದನ್ನ ಕಂಡು ಮನಸ್ಸಿಗೆ ಬಹಳ ಬೇಸರವಾಯಿತು.

ಇದನ್ನೆಲ್ಲ ನೋಡಿದಾಗ, ನಾವು ಹಬ್ಬಗಳನ್ನ ಆಚರಿಸುವ ಉದ್ದೇಶ ಎಲ್ಲರೂ ಒಂದಾಗಿ, ಸಂತೋಷ ಪಡಲಿಕ್ಕೆ ವಿನಹ ಈ ರೀತಿಯ ಘಟನೆಗಳಿಗಳಲ್ಲ. ಆದರೆ, ನನಗೆ ಅನ್ನಿಸಿದ್ದು ಏನೆಂದರೆ, ಇಷ್ಟು ವರ್ಷಗಳಿಂದ ನಾವು ಇದೇ ಸಮಾಜದ ಜೊತೆಗೆ ನಡೆದುಕೊಂಡು ಬಂದಿದ್ದೇವೆ. ನನ್ನ ಹಾಗೆಯೇ ಎಷ್ಟೋ ಜನ ಬರೆದು, ಹಾಡಿ, ಹೇಳಿ, ಬೊಬ್ಬೆ ಹೊಡೆದರೂ ಸಹ ಬದಲಾಗದ ನಮ್ಮ ಜನ ನನ್ನ ಈ ಒಂದು ಲೇಖನದಿಂದ ಬದಲಾಗಬಹುದು ಎಂಬ ಆಶಯ ನನಗಂತೂ ಇಲ್ಲ.

ಮತ್ಯಾಕೆ, ಗುರುವೇ ನಿನ್ನ ಸಮಯ ಹಾಳು ಮಾಡಿಕೊಂಡು ಈ ಮಹತ್ ಕಾರ್ಯಕ್ಕೆ ಮುಂದಾಗಿದ್ದಿಯಾ ಅಂತ ನೀವು ಕೇಳಿದರೆ ನನ್ನಲ್ಲಿ ಇರುವ ಉತ್ತರವೆಂದರೆ, ನಾನೂ ಸಹ ಈ ಸಮಾಜದ ಭಾಗ. ಎಲ್ಲರ ಹಾಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ನನಗಾಗುವುದಿಲ್ಲ. ಜೊತೆಗೆ, ಜವಾಬ್ದಾರಿಯುತ ನಾಗರಿಕನಾಗಿ, ನಾನು ಇದುವರೆಗೂ ಯಾವುದೇ ಬೇಡದ ಅಥವಾ ನಿಯಮ ಉಲ್ಲಂಘಿಸಿ ನಡೆದಿಲ್ಲ ಹಾಗಾಗಿ ಇಂತಹ ಸಂಧರ್ಭಗಳು ಎದುರಾದಾಗ ಅರಗಿಸಿಕೊಳ್ಳಲು ಕಷ್ಟವೆನಿಸಿ ಈ ರೀತಿ ಹೊರಹಾಕ ಬಯಸಿದೆ.

ಸೋ, “ಬಿ ದ ಚೇಂಜ” ಅನ್ನುವ ವಾಕ್ಯವನ್ನ ಪರಿಪಾಲನೆ ಮಾಡುವವನಾಗಿ, ನಿಮ್ಮಲ್ಲಿ ನಿಮ್ಮ ಕುಚಿಕುವಾಗಿ, ಸ್ನೇಹಿತನಾಗಿ ಕೇಳಿಕೊಳ್ಳುವುದೇನೆಂದರೆ, ದಯಮಾಡಿ ತಿಳಿದವರಾಗಿ, ತಿಳಿಗೇಡಿ ತನವನ್ನ ಮಾಡಬೇಡಿ. ಯಾಕೆಂದರೆ, ಕರ್ಮ ಯಾರನ್ನೂ ಬಿಡುವುದಿಲ್ಲ. ನೀವು ಹೋದರೂ ನಿಮ್ಮ ಮಕ್ಕಳು ಮುಂದೆ ಇದೆ ಅವ್ಯವಸ್ಥಿತ ಸಮಾಜದಲ್ಲಿ ಬದುಕಬೇಕಾಗಬಹುದು. ಒಮ್ಮೆ ಯೋಚಿಸಿ ನೋಡಿ…!

              ‌ಚೇತನ ದ. ಕುಲಕರ್ಣಿ, ಬೆಳಗಾವಿ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";