Live Stream

[ytplayer id=’22727′]

| Latest Version 8.0.1 |

Local News

ಆಶ್ರಯ ಶಕ್ತಿ ಸದನ ಹಿಡಕಲ್ ಡ್ಯಾಮನಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ

ಆಶ್ರಯ ಶಕ್ತಿ ಸದನ ಹಿಡಕಲ್ ಡ್ಯಾಮನಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ

ಹುಕ್ಕೇರಿ: ತಾಲೂಕಿನ ಆಶ್ರಯ ಶಕ್ತಿ ಸದನ ಹಿಡಕಲ್ ಡ್ಯಾಮನಲ್ಲಿ ಮಾಣಿಕವಾಡಿ ಕರ್ನಾಟಕ ಭೀಮ ರಕ್ಷಕ ಸಂಘಟನೆ (ರಿ) ವತಿಯಿಂದ ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿಯನ್ನ ಆಚರಿಸಲಾಯಿತು.

ಕಾರ್ಯಕ್ರಮವನ್ನ ಉದ್ಘಾಟಿಸಿ ಮಾಣಿಕವಾಡಿಯ ಪುರಸಭೆ ಸದಸ್ಯರಾದ ಅಶೋಕ್ ಕುಮಾರ್ ನಾಯಕ್ ಮಾತನಾಡಿ, ಹೆಸರಾಂತ ಭಾರತೀಯ ರಾಜಕಾರಣಿ ಮತ್ತು ಸಮಾಜ ಸುಧಾರಕ ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾರ್ಥ, ಅವರು 1891 ರಲ್ಲಿ ಇದೇ ದಿನ ಜನಿಸಿದರು. ಭಾರತದ ಕೆಲವು ಭಾಗಗಳಲ್ಲಿ ಇದನ್ನು ‘ಸಮಾನತಾ ದಿನ’ ಎಂದೂ ಕರೆಯಲಾಗುತ್ತದೆ.

ಅಂಬೇಡ್ಕರ್ ಅವರ ಜನ್ಮದಿನದ ಮೊದಲ ಸಾರ್ವಜನಿಕ ಆಚರಣೆಯನ್ನು 1928 ರಲ್ಲಿ ಪುಣೆಯಲ್ಲಿ ಅಂಬೇಡ್ಕರ್ ಜಯಂತಿಯ ಸಂಪ್ರದಾಯವನ್ನು ಪ್ರಾರಂಭಿಸಿದ ಅಂಬೇಡ್ಕರ್ವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಜನಾರ್ದನ ಸದಾಶಿವ ರಣಪಿಸೇ ಅವರು ಆಯೋಜಿಸಿದ್ದರು. ಏಪ್ರಿಲ್ 12, 2024 ರಂದು, ಸಬರಮತಿ ವಿಶ್ವವಿದ್ಯಾಲಯದ ಕಾನೂನು ಶಾಲೆಯು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಆಚರಣೆಯನ್ನು ಆಯೋಜಿಸುತ್ತದೆ.

ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಅದರ ಜೊತೆಯಲ್ಲಿ ಈ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕ‌ರ್ ಅವರ ಆಶಯವಾಗಿತ್ತು. ‘ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು’ ಎಂದು ಹೇಳುವುದರ ಮೂಲಕ ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಹೇಳಿದ್ದಾರೆ ಎಂದು ಹೇಳಿದರು.

ನಂತರ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಈಶ್ವರ್ ಗುಡಜವರು ಮಾತನಾಡಿ, ಡಾ.ಬಿ.ಆ‌ರ್.ಅಂಬೇಡ್ಕರ್ ಅವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಶತಮಾನಗಳಿಂದಲೂ ತಳ ಸಮುದಾಯಗಳಿಗೆ ಆದಂತಹ ಅನ್ಯಾಯಗಳನ್ನು ಸರಿಪಡಿಸಿ ಸಮಾನ ಅವಕಾಶಗಳನ್ನು ಒದಗಿಸುವುದರ ಬಗ್ಗೆ ಹಾಗೂ ಇವುಗಳ ಹಿಂದಿನ ತಾರ್ಕಿಕತೆ ಮತ್ತು ಅನುಷ್ಠಾನದ ನಡುವೆ ಚರ್ಚೆಗಳಾಗಬೇಕಾಗಿದೆ. ಇದರಿಂದ ಅಲ್ಪಮಟ್ಟಿಗೆ ಸಾಮಾಜಿಕ ನ್ಯಾಯ ದೊರಕುತ್ತಿರುವುದು ಹಾಗೂ ಕ್ರಮೇಣ ಅಸಮಾನತೆ ಎಂಬುದು ನಿವಾರಣೆಯಾಗುತ್ತದೆ ಎಂಬುದರ ಭರವಸೆ ದಮನಿತ ವರ್ಗಗಳಲ್ಲಿ ಮೂಡುತ್ತಿದೆ. ದೇಶ ಸಂಪೂರ್ಣ ಸಮಾನತೆ ಕಂಡಾಗ ಬಾಬಾಸಾಹೇಬರ ಕನಸು ನನಸಾಗುತ್ತದೆ ಎಂಬುದನ್ನು ನಾವುಗಳು ಅರಿಯಬೇಕಾಗಿದೆ.

ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ, ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ತಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಬಾಸಾಹೇಬರು ನಂಬಿದ್ದರು. ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಕಾಣಬಹುದು ಎಂದು ಹೇಳಿದರು.

ಅನಂತರ, ಆಶ್ರಯ ಶಕ್ತಿ ಸದನ ಫಲಾನುಭವಿಗಳಿಗೆ ಸೀರೆ, ಟೂತ್ ಪೇಸ್ಟ್ ಹಾಗೂ ಆಯಿಲ್ ವಿತರಣೆಯನ್ನ ಮಾಡಿದರು.

ಸಂಧರ್ಭದಲ್ಲಿ, ಮಾಣಿಕವಾಡಿಯ ಪುರಸಭೆ ಸದಸ್ಯರಾದ ಅಶೋಕ್ ಕುಮಾರ್ ನಾಯಕ್, ಕರ್ನಾಟಕ ಭೀಮ ರಕ್ಷಣಾ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷರಾದ ಮಹಾನಿಂಗ ಶಿರುಗುಪ್ಪಿ, ಕರ್ನಾಟಕ ಭೀಮ ರಕ್ಷಣಾ ಸಂಘಟನೆಯ ರಾಜ್ಯಾಧ್ಯಕ್ಷರಾದ ಈಶ್ವರ್ ಗೂಡ, ಸಂಘಟನೆಯ ಪ್ರಮುಖರಾದ ಮುರಲಿಂಗ ಗೋರಬಾಳ, ಸಂತೋಷ್ ಮುತ್ತುಸ್ವಾಮಿ ಬೋರಕಿ, ಶ್ರೀಮತಿ ದ್ರಾಕ್ಷಾಯಿಣಿ ಮಠಪತಿ ರೇಸಿಡೆನ್ಸಿಯಲ್ ಸೂಪರ್ಡೆಂಟ್ ಆಶ್ರಯ ಶಕ್ತಿ ಸದನ ಹಿಡ್ಕಲ್ ಡ್ಯಾಮ್, ಶ್ರೀಮತಿ ಮಂದಾಕಿನಿ ಹಟ್ಟಿ ಮಲ್ಟಿ ಪರ್ಪಸ್ ಸ್ಟಾಫ್ ಹಾಗೂ ಫಲಾನುಭವಿಗಳು ಇನ್ನಿತರರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";