ಹಿಡಕಲ್ ಡ್ಯಾಮ್: ಇಲ್ಲಿನ ವಿಶ್ವೇಶ್ವರಯ್ಯ ಪ್ರೌಢ ಶಾಲೆಯ ಸಭಾಂಗಣದಲ್ಲಿ ಏ.15ರಂದು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಜಿಲ್ಲಾ ಘಟಕ ಚಿಕ್ಕೋಡಿ ಹಾಗೂ ತಾಲೂಕಾ ಘಟಕ ಹುಕ್ಕೇರಿ ಸಂಯುಕ್ತ ಆಶ್ರಯದಲ್ಲಿ, ಡಾ. ಬಿ ಆರ್ ಅಂಬೇಡ್ಕರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಿಗ್ಗೆ 10 ಘಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ಈ ವೇಳೆ, ಚಿಕ್ಕೋಡಿಯ ಉಪನಿರ್ದೇಶಕರಾದ ಆರ್. ಸೀತಾರಾಮು, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಪಾಟೀಲ, ಬಸವರಾಜ ಕಡಕಬಾವಿ, ಉಪನ್ಯಾಸಕರಾಗಿ ಬಿ. ಎಸ್. ನಾಡಕರ್ಣಿ, ಭರತ ಪಾರ್ಥನಳ್ಳಿ, ಬಿ ಎಸ್ ಮಾನೆ, ರಾಜ್ಯ ಸಂಘದ ರಾಜು ತಳವಾರ, ಎಸ್ ಪಿ ಕಟ್ಟೆನ್ನವರ, ಆರ್ ಎ ಮಿತ್ರನ್ನವರ, ಜಿಲ್ಲಾ ಸಂಘದ ಎಸ್. ಬಿ ಶಿಂಗೆ, ಜಿ ಎಮ್ ಕಾಂಬಳೆ, ರಾಜು ಕಾಮತ್, ಎಸ್. ಬಿ ಭೀಮಗೋಳ ವಿವಿಧ ಸಂಘಟನೆಗಳ ಅಧ್ಯಕ್ಷರಾದ ಅವಿನಾಶ ಹೊಳೆಪ್ಪಗೋಳ, ವಿನಾಯಕ ನಾಯಿಕ, ಎಸ್. ಎ ಸರಿಕರ, ರಾಜು ಭಾಗೋಜಿ, ಉಮಾ ಪಡೆಪ್ಪನವರ, ಮಹಾದೇವಿ ಸಣ್ಣಾಯಿಕ, ಎ. ಜಿ ಕಾಂಬಳೆ, ಬಿ. ಎಮ್ ವಾಜರೆ, ಬಿ. ಕೆ ದೊಡಮನಿ, ಪ್ರಸಾದ ಬೀರನಗಡ್ಡಿ, ಮುಜಾವರ ಹಾಗೂ ವಿವಿಧ ತಾಲೂಕಾ ಅಧ್ಯಕ್ಷರು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.