ಬೆಳಗಾವಿ: ನಗರದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಆರ್‌ಸಿಬಿ ದರ್ಪಣ್ ಅಂಗನವಾಡಿ ಶಿಕ್ಷಕಿಯರಿಗಾಗಿ ಪರಿಣಾಮಕಾರಿ ಒತ್ತಡ ನಿರ್ವಹಣೆ ಕುರಿತು ಒಳನೋಟವುಳ್ಳ ಅಧಿವೇಶನವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಗೌರವಾನ್ವಿತ ಅತಿಥಿ ಭಾಷಣಕಾರರಾದ ಆರ್‌ಟಿಎನ್. ಡಾ. ಸ್ಫೂರ್ತಿ ಮಾಸ್ತಿಹೊಳ್ಳಿ ಅವರು ಮಾತನಾಡಿ, ಒತ್ತಡದ ದಿನವನ್ನು ಸುಲಭವಾಗಿ ನಿಭಾಯಿಸಲು, ಎಲ್ಲರನ್ನೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ತೊಡಗಿಸಿಕೊಳ್ಳಲು ಅವರು ಪ್ರಾಯೋಗಿಕ ತಂತ್ರಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಅಧಿವೇಶನವು ಉತ್ಸಾಹಭರಿತವಾಗಿತ್ತು, ಮತ್ತು ಶಿಕ್ಷಕರು ಪೂರ್ಣ ಹೃದಯದಿಂದ ಭಾಗವಹಿಸಿದರು.
ಅಧ್ಯಕ್ಷೆ ಆರ್‌ಟಿಎನ್ ರೂಪಾಲಿ ಜನಜ್ ಸಭೆಯನ್ನು ಸ್ವಾಗತಿಸಿದರು, ಕಾರ್ಯಕ್ರಮದ ಅಧ್ಯಕ್ಷೆ ಆರ್‌ಟಿಎನ್ ಊರ್ಮಿಳಾ ಗಣಿ, ಆರ್ ಟಿ ಏನ್ ಸವಿತಾ ವೇಸಾನೆ, ಸಿಡಿಪಿಒ ಇಲಾಖೆಯ ಹಿರಿಯ ಮೇಲ್ವಿಚಾರಕಿ ಶ್ರೀಮತಿ ಜ್ಯೋತಿ ಜಂಗ್ಲಪ್ಪಗವ್ಡರ್ ಮತ್ತು ಶ್ರೀಮತಿ ರಾಜಶ್ರೀ ಸೌದಿ ಹಾಗೂ 70 ಕ್ಕೂ ಹೆಚ್ಚು ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷೆ ಆರ್‌ಟಿಎನ್ ಊರ್ಮಿಳಾ ಗಣಿ ಧನ್ಯವಾದಗಳನ್ನು ಅರ್ಪಿಸಿದರು. ಆರ್ ಟಿ ಏನ್ ಅಡ್ವ. ದಿವ್ಯಾ ಮುದಿಗೌಡರ್ ಇವರು ಕಾರ್ಯಕ್ರಮದ ನಿರ್ವಹಣೆಯನ್ನು ನಿರ್ವಹಿಸಿದರು.