ಬೆಳಗಾವಿ: ನಗರದ ಮಾಳಮಾರುತಿ ನಾಗರಿಕ ವಿಕಾಸ ಸಂಘದಿಂದ ಎಸ್ ಜಿ ವಿ ಮಹೇಶ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಜರುಗಿತು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಡಾ. ಪ್ರಸಾದ ಎಂ.ಆರ್ ಅವರು ದೈಹಿಕ ಶ್ರಮ , ವ್ಯಾಯಮ,ಯೋಗ,ನಿಯಮಿತ ಸಾತ್ವಿಕ ಆಹಾರ ಸೇವನೆಯಿಂದ ಬಿಪಿ, ಶುಗರ ‘ ಬರದಂತೆ ತಡೆಯಬಹುದೆಂದು ಹೇಳಿದರು.
ಆರೋಗ್ಯ ತಪಸಣಾ ತಂಡದೊಂದಿಗೆ ಆಗಮಿಸಿ ಸುಮಾರು 60 ಹಿರಿಯ ನಾಗರಿಕರಿಗೆ ಬಿಪಿ, ಸುಗರ ಹಾಗೂ ಇಸಿಜಿ ತಪಾಸಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ ಎಂ ಬೂದಿಹಾಳ ವಹಿಸಿದ್ದರು.
ಶಶಿಕಾಂತ ಗುಂಡಕಲ್ಲೆ ಸ್ವಾಗತಿಸಿದರು. ಪ್ರಭಾಕರ ವನಹಳ್ಳಿ ವಂದಿಸಿದರು. ಪ್ರಾಚಾರ್ಯ ಮಂಜುನಾಥ ಭಟ್ಟ’ ನಾಗರಿಕ ವಿಕಾಸ ಸಂಘದ ಸಿ ಎಸ್ ಬಗಲಿ, ಜಗದೀಶ ಚಿಮ್ಮಲಗಿ, ಎಂ ಎಸ್ ಪಾಟೀಲ, ಯೋಗೇಶ ಬಿದರಿ, ಎಸ್ ಎಸ್ ರಾಮದುರ್ಗ, ಎಂ ವೈ ಮೆನಸಿನಕಾಯಿ ಮುಂತಾದವರು ಉಪಸ್ಥಿತರಿದ್ದರು.