ಬೆಳಗಾವಿ: ನಗರದ ಮಹಾಂತ ಭವನದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಇವರಿಂದ ಮಾಸಿಕ ಅನುಭಾವ ಗೋಷ್ಠಿ ಜರುಗಿತು.
ಶಟಸ್ಥಲ ದ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸಹಾಯಕ ಪ್ರಾಧ್ಯಾಪಕರು, ಸಾಗರ ಶಿಕ್ಷಣ ಮಹಾ ವಿದ್ಯಾಲಯದ ಡಾ. ಮಹಾಂತೇಶ ನರಸಣ್ಣವರ ಮಾತನಾಡಿ, ಚನ್ನಬಸವನ್ನವರ ವಚನಗಳು ನಮಗೆ ತತ್ವಜ್ಞಾನವನ್ನ ತಿಳಿಸುತ್ತವೆ. ಅನುಭಾವವೇ ಅಂತರಂಗದ ರತ್ನ ಅಂತ ತಿಳಿಸಿದರು ಚನ್ನಬಸವಣ್ಣನವರು. ಹಾಗಾಗಿ ಮಾನವನ ಮನಸ್ಸು, ಜ್ಞಾನದ, ಬದುಕಿನ ಸತ್ಯ, ಆಧ್ಯಾತ್ಮದ ಕುರಿತು ಚೆನ್ನಬಸವಣ್ಣನವರು ತಮ್ಮ ವಚನಗಳಲ್ಲಿ ವ್ಯಕ್ತ ಪಡಿಸಿದರು. ಎಂದು ಹೇಳಿದರು.
ಈ ಸಂದರ್ಭದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿಯ ಅಧ್ಯಕ್ಷರಾದ ಬಸವರಾಜ ರೊಟ್ಟಿ, ಪ್ರಸಾದ ದಾಸೋಹಿಗಳು ಸೂರನಯ್ಕ್ ಇಂಚಲ, ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಈರಣ್ಣ ಚಿನಗುಡಿ ಹಾಗೂ ಶರಣ ಶರಣೆಯರು ಉಪಸ್ಥಿತರಿದ್ದರು.